ತಾಲೂಕು ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ

ಪಂಜ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ ) ಸುಳ್ಯ ತಾಲೂಕು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪಂಜ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಂದು ಪರಿವಾರ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು… ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶ್ರೀಮತಿ ನಳಿನಿ, ಕೂತ್ಕುಂಜ ಒಕ್ಕೂಟದ ಅಧ್ಯಕ್ಷರು ವಹಿಸಿಕೊಂಡಿದ್ದರು.. ಡಾ! ದೇವಿಪ್ರಸಾದ್ ಕಾನತ್ತೂರು, (ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ, ಪಂಜ ,) ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ 2 ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ ಮತ್ತು ಜಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಾದ ಬದಲಾವಣೆಗಳ ಬಗ್ಗೆ ತಿಳಿಸಿದರು..ಜ್ಞಾನ ವಿಕಾಸ ಸದಸ್ಯರಾದ ಮನೋರಮಾ ಪೈಲಾರು ರವರು ಅನಿಸಿಕೆ ವ್ಯಕ್ತಪಡಿಸಿದರು.. ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರು ಸುರೇಶ್ ಕಣೆಮರಡ್ಕ ರವರು ಯೋಜನೆ ಕಾರ್ಯಕ್ರಮಗಳು, ಜನರಿಗೆ ಸಿಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.. ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎಣ್ಣೆಮಜಲು ನಾಟಿ ವೈಧ್ಯೆ ಬಾಲಕ್ಕ, sslc ಮತ್ತು puc ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಜ್ಞಾನವಿಕಾಸ ಕೇಂದ್ರದ ಸದಸ್ಯರನ್ನು ಗುರುತಿಸಲಾಯಿತು.ಕುಟುಂಬದ ಸಂಸ್ಕೃತಿ ಮತ್ತು ಸಂಸ್ಕಾರದ ಅನುಷ್ಠಾನದಲ್ಲಿ ಮಹಿಳೆಯರಪಾತ್ರ ಈ ವಿಚಾರ ಗೋಷ್ಠಿ ಯನ್ನು ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್, ಕಾರ್ಯದರ್ಶಿಗಳು, ವೇದ ಮತ್ತು ಕಲಾ ಪ್ರತಿಷ್ಠಾನ ಹಾಗೂ ಶ್ರೀಮತಿ ತ್ರಿವೇಣಿ, ಆಧ್ಯಾತ್ಮಿಕ ಸಂಯೋಜಕಿ, ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆ, ಚೊಕ್ಕಾಡಿ ನೆರವೇರಿಸಿದರು….ಗ್ರಾ ಪಂಚಾಯತ್ ಅಧ್ಯಕ್ಷರು, ಪಂಜ ವಿಜಯಲಕ್ಷ್ಮಿ ಜಳಕದ ಹೊಳೆ, ಶಿವಪ್ರಸಾದ್ ಮಾದನಮನೆ, ಜನಜಾಗೃತಿ ವಲಯಧ್ಯಕ್ಷರು, ಶ್ರೀ ಧರ್ಮಪಾಲ ಕಣ್ಕಲ್ ವಲಯಧ್ಯಕ್ಷರು ಪಂಜ, ಎಲ್ಯಣ್ಣ ಗೌಡ ಕಟ್ಟ, ಶ್ರೀ ಮಂಜುನಾ
ಥೇಶ್ವರ ಭಜನಾ ಪರಿಷತ್ ನ ವಲಯಧ್ಯಕ್ಷರು, ತಾಲೂಕು ಯೋಜನಾಧಿಕಾರಿಕಾರಿ ಮಾಧವ, ಮೇಲ್ವಿಚಾರಕಿ ಕಲಾವತಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀಮತಿ ಲಕ್ಷ್ಮಿ, ವಲಯದ ಸೇವಾಪ್ರತಿನಿಧಿಯವರು, ತಾಲೂಕಿನ ಜ್ಞಾನವಿಕಾಸ ಕೇಂದ್ರ ದ ಸದಸ್ಯರು ಉಪಸ್ಥಿತರಿದ್ದರು….

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top