ಹಣವೆಂಬ ಮಾಯೆ,ಹಣಕೆ ಮರುಳಾಗದವರು ಯಾರು ಇಲ್ಲ !

ಜಗತ್ತು ಒಂದು ಮಾಯೆ, ಆ ಮಾಯೆಯ ಒಳಗೆ ನಾವು ಒಂದು ಕೀಲು ಗೊಂಬೆ ಇದ್ದ ಹಾಗೆ. ಈ ಮಾಯದ ಜಗತ್ತಿನಲ್ಲಿ ಗುಣಕ್ಕಿಂತ ಹಣವೇ ಮೇಲಾಗಿದೆ.
“ಹಣ ಕಂಡರೆ  ಹೆಣವು ಬಾಯಿ ಬಿಡುತ್ತದೆ” ಎಂಬ ಮಾತು ನೂರಕ್ಕೆ ನೂರು ಸತ್ಯವಾದದ್ದು. ಆ ಕಾಗದದ ಚೂರು ನಮಗೆ ಬೇಕಾದಷ್ಟು ಗೌರವವನ್ನು ಕೊಡಿಸುತ್ತದೆ. ಆದರೆ ನಿಜವಾದ ವ್ಯಕ್ತಿಗಳನ್ನಲ್ಲ .ಈ ಮಾಯದ ಜಗತ್ತಿನಲ್ಲಿ ಹಲವಾರು ಬದಲಾವಣೆ ಆಗುವುದು ಆದರೆ ಮಾನವ ಕುಲವು ಕೆಲವೊಮ್ಮೆ  ಮಾನವೀಯತೆಗಿಂತ,ಸ್ನೇಹ- ಸಂಬಂಧಗಳಿಗಿಂತ ಹೆಚ್ಚು ಮಾನವ ಒಲವನ್ನು ನೀಡುವುದು ಹಣಕ್ಕೆ ಮಾತ್ರ. ಬಡವರಿಗೆ ಕಾಂಚಾಣವೆಂಬುವುದು ಕೈಗೆಟುಕದ ನಕ್ಷತ್ರ ಎಂದರೆ ತಪ್ಪೇನಿಲ್ಲ..  ಏಕೆಂದರೆ ಬಡವರು ಎಷ್ಟೇ ದುಡಿದರು, ಒಂದು ಹೊತ್ತಿನ ತುತ್ತಿಗೂ ಆ ಹಣ ಸಾಕಗುವುದಿಲ್ಲ.
ಜೀವನದ ಕೆಲವೊಂದು ಘಟ್ಟ ತಲುಪಿದಂತೆ ಹಣವೆಷ್ಟು ಮುಖ್ಯವೆಂದು ತಿಳಿಯುತ್ತಿದೆ.
ಹಣವಿಲ್ಲದಿದ್ದರೆ ಈ ಸಮಾಜದಲ್ಲಿ ಗೌರವ ಅಷ್ಟಕ್ಕಷ್ಟೆ  ಎಂಬುವುದು ವಿಪರ್ಯಾಸ .ಜಾತ್ರೆಯಲ್ಲಿ ಚಿಕ್ಕ ಮಕ್ಕಳು ತಮ್ಮ ಪುಟ್ಟ ಹೊಟ್ಟೆ ತುಂಬಿಸಲು ಹಣಕ್ಕಾಗಿ ಕೈ ಚಾಚಿ ಬೇಡುವುದನು ನೋಡಿದರೆ ಕೆಲವೊಮ್ಮೆ ಹಣದ ಮೇಲೆಯೇ ಜಿಗುಪ್ಸೆ ಬರುವುದುಂಟು. ಆ ಜಾತ್ರೆ ಹಲವರಿಗೆ ಸಂಭ್ರಮವಾದರೆ ಇನ್ನೂ ಕೆಲವರಿಗೆ ಬೇಸರದಲ್ಲೊಂದು ಸಂಭ್ರಮ.ಹಣದ ಮಾಯಾಜಾಲದಲ್ಲಿ ಜಗತ್ತು ಕತ್ತಲಾಗಿದೆ. ಹಣವಿಲ್ಲವೆಂದರೆ ಈ ಸಮಾಜದಲ್ಲಿ ಬದುಕುವುದು ಕಷ್ಟಕರ.  ಜಗತ್ತಿನಲ್ಲಿ ಮಾನವ ಜಾಸ್ತಿ ಒತ್ತು ನೀಡುವುದು ಹಣವೆಂಬ ಒಂದು ಕಾಗದದ ಚೂರಿಗೆ.ಈ ಮಾಯಲೋಕದಲ್ಲಿ ಮನುಷ್ಯ ತನ್ನ ಬದುಕನ್ನು ಹಣ ಸಂಪಾದನೆಗಾಗಿ ಮಾತ್ರ  ಮುಡಿಪಾಗಿರಿಸಿದ್ದಾನೆ ಎಂದರೆ ತಪ್ಪಿಲ್ಲ .ಮಾಯದ ಜಗತ್ತಿನಲ್ಲಿ ಹಣವೇ ಎಲ್ಲಾ ಎಂಬ ಮಾತು ಸತ್ಯವಾದದುಬದುಕು ಎಂಬ ಸೇತುವೆಯಲ್ಲಿ ಹಣವೆಷ್ಟು ಮುಖ್ಯ ಎಂದು ನಾವು ದುಡಿದ ಮೇಲೆಯೇ ನಮಗೆ ಅರಿಯುವುದು.ಜೀವನದಲ್ಲಿ ಅರ್ಧ ಜೀವನ ಕಷ್ಟ, ಇನ್ನು ಅರ್ಧ ಜೀವನ ಹಣ ಮಾಡುವ ಹಂಬಲ….ಜೀವನದಲ್ಲಿ ಹಣದ ಎಂಬ ಮಾಯೆ ಯಾರನು ಬಿಡುವುದಿಲ್ಲ.
ಹಣದ ಆಸೆಗೆ ಸಿಲುಕಿ ಎಷ್ಟೋ ಯುವಜನತೆ ಆನ್ಲೈನ್ ಮೂಲಕ ಆಟವನ್ನು ಆಡಿ ಹಣವನ್ನು ಕಳೆದುಕೊಂಡ ಸಂಗತಿಗಳು ಇತ್ತೀಚಿಗಂತು ತೀರಾ ಪರಿಚಿತ.ಇದರಿಂದ ಹಲವಾರು ನಷ್ಟವು ಉಂಟಾಗುವುದರೊಂದಿಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬರುವುದು ಶೋಚನಿಯ. ಹಣದ ಮಾಯಾ ಜಾಲಕ್ಕೆ ಸಿಲುಕಿ ನಿಮ್ಮ ಜೀವನಕ್ಕೆ ಅಪಾಯವನ್ನು ತಂದುಕೊಳ್ಳಬೇಡಿ.
ಹಣವೆಂಬುದು ಮಾಯೆ, ಅದರೊಳಗಿರುವುದು ಅರಿಯದ ಕರಿ ಛಾಯೆ ‘
*ಮಧುಶ್ರೀ ಸರ್ವೆ*
*ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ*
*ವಿವೇಕಾನಂದ ಕಾಲೇಜು ಪುತ್ತೂರು*

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top