ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್.ಎನ್.ಮನ್ಮಥ ಮೂರನೇ ಬಾರಿ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಹೇಶ್ ಜಬಳೆ ಆಯ್ಕೆಯಾದರು.
ಇಂದು ಸಂಘದ ಸಭಾಭವನದಲ್ಲಿ ಅವಿರೋಧ ಆಯ್ಕೆ ನಡೆಯಿತು.
ಡಿ.22 ರಂದು ಚುನಾವಣೆ ನಡೆದು ಎಸ್.ಎನ್.ಮನ್ಮಥರವರ ತಂಡದ 11 ಮಂದಿ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಬಿಜೆಪಿ ಬೆಂಬಲಿತ ಅಭ್ಯರ್ಥಿ ಒಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರು ಉಪಸ್ಥಿತರಿದ್ದು ಶುಭಹಾರೈಸಿದರು.
ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಚಂದ್ರಶೇಖರ ಎಸ್,ರವಿನಾಥ ಮಡ್ತಿಲ,ಮಧುಕರ ನಿಡುಬೆ,ಅನಂತಕುಮಾರ್ ಖಂಡಿಗೆಮೂಲೆ,ಪುರಂದರ ಶಾಂತಿಮೂಲೆ,ಭವಾನಿ ಎಂ.ಸಿ ದಿವ್ಯಾರಮೇಶ್ ಮಿತ್ತಮೂಲೆ,ನಟರಾಜ್ ಸಿ.ಕೂಪ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.