ತಾಲೂಕಿನಲ್ಲಿ,ತಾಲೂಕು ಆಡಳಿತ ಮಲಗಿದೆ.ಇಡೀ ಸುಳ್ಯ ತಾಲೂಕಿನ ಜನತೆಗೆ,ವಿದ್ಯಾರ್ಥಿಗಳಿಗೆ,ಪೆಡoಬೂತದಂತೆ ಕಾಡುವ ಸಮಸ್ಯೆ ಆಧಾರ ಕಾರ್ಡ್ ತಿದ್ದುಪಡಿ.
ಸಾರ್ವಜನಿಕರ ಅನೇಕ ಸರಕಾರಿ ಸವಲತ್ತುಗಳನ್ನು ಪಡೆಯಲು, ಜಾಗದ ಸಮಸ್ಯೆಗಳಿಗೆ, ಪಾಸ್ ಪೋರ್ಟ್ ಪಡೆಯಲು, ಹಾಗೂ ಇತರೆ ಎಲ್ಲಾ ಸರಕಾರಿ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಹಾಗೂ ಇತರೆ ಶಾಲಾ ಕಾಲೇಜು ಕೆಲಸಗಳಿಗೆ, ಮೊದಲನೇ ಡಾಕ್ಯುಮೆಂಟ್ ಕೇಳೋದು ಆಧಾರ್ ಕಾರ್ಡ್. ಆಧಾರ ಕಾರ್ಡ್ ಮಾಡುವ ಸಂದರ್ಭ , ಬಹು ದೃಷ್ಟಿಯುಳ್ಳ ಅಧಿಕಾರಿಗಳು ಮಾಡುವ ಎಡವಟ್ಟುಗಳನ್ನು,ಸರಿಪಡಿಸದೆ ಇದ್ದಲ್ಲಿ, ನಿದ್ರೆಯಲ್ಲಿರುವ ನಮ್ಮದೇ ತಾಲೂಕಿನ ತಾಲೂಕಿನ, ಬಹಳ ಸೌಮ್ಯ ಸಭಾವದ ಅಧಿಕಾರಿಗಳಿಗೆ ಸುಳ್ಯದಲ್ಲಿ ಆಧಾರ ಸರಿಪಡಿಸಲು ಪೋಸ್ಟ್ ಆಫೀಸ್,ಒಂದೇ ಕೇಂದ್ರ ಇರುವುದು, ಸಾವಿರಾರು ಜನ ಕಾದುಕೊಂಡಿದ್ದರೂ,,ದಿನಕ್ಕೆ ಕೇವಲ 10 ರಿಂದ 15 ಜನಕ್ಕೆ ಮಾತ್ರ ತಿದ್ದುಪಡಿ ಮಾಡೋಕೆ ಅವಕಾಶ ಇರೋದು ಎಂದು ಗೊತ್ತಿದ್ದೂ,ಆಧಾರ್ ಕಾರ್ಡ್ ನಲ್ಲಿರುವ ವಿಳಾಸಕ್ಕೋ, ಫೋನ್ ನಂಬರ್ಗೋ, ಅಪ್ಪ ಅಮ್ಮನ ಹೆಸರಿಗೋ, ಇನ್ಸಿಯಲ್ ಗೋ, ಅಥವಾ ಯಾವುದೊ ಒಂದು ಟ್ಯಾಲಿ ಆಗ್ತಿಲ್ಲ ಸರಿಪಡಿಸಿ ಬನ್ನಿ ಅಂತ ಹೇಳೋವರಿಗೆ, ಸುಳ್ಯದಲ್ಲಿ, ಪೋಸ್ಟ್ ಆಫೀಸ್ ಅಲ್ಲದೆ ಒಂದೆರಡು ಆಧಾರ ಕಾರ್ಡ್ ತಿದ್ದುಪಡಿ ಕೇಂದ್ರ ತೆರೆಯಬೇಕು ಅನ್ನೋ ಸಣ್ಣ ಪರಿಜ್ಞಾನ ಇಲ್ಲದೆ ಇರುವುದು, ನಮ್ಮ ತಾಲೂಕಿನ ಶಾಸಕರ ಹೆಸರಿಗೆ ಮಸಿ ಬಳೆಯುವ ಪ್ರಯತ್ನ ಅಧಿಕಾರಿ ವರ್ಗದಿಂದ ನಡೆಯುತ್ತಿದೆಯೇ ಅನ್ನೋ ಅನುಮಾನ ಸಾರ್ವಜಕರಲ್ಲಿ ವ್ಯಕ್ತವಾಗುತ್ತಿದೆ.
ಯಾಕಂದರೆ ಶಾಸಕರಿಗೆ ಜನರ ಸಮಸ್ಯೆಯನ್ನು ತಿಳಿಯಪಡಿಸುವ ಸಲುವಾಗಿ ಈ ಹಿಂದೆ ಹಲವಾರು, ತಳಮಟ್ಟದ ಜನಪ್ರತಿನಿದಿನಗಳು, ಹಲವಾರು ಸಲ ಮನವಿ ಮಾಡಿದ್ದೂ,ಪತ್ರಿಕಾ ಮಾಧ್ಯಮದಲ್ಲಿ ಪ್ರಸಾರವಾದರೂ, ಇದೊಂದು ಸಾಮಾನ್ಯ ಸಮಸ್ಯೆ ಎಂದು ತಿಳಿದುಕೊಂಡಿರುವುದು ನಮ್ಮೆಲ್ಲರ ಜನಪ್ರತಿನಿದಿಗೆ,ಅಧಿಕಾರಿ ವರ್ಗ ಮಾಡಿರುವ ಅವಮಾನ, (ಅಂದರೆ ಜನರಿಗೆ ಮಾಡಿರುವ ಅವಮಾನ) ಅಲ್ಲವೇ??
ಇನ್ನಾದರೂ ಶಾಸಕರು, ಮಲಗಿರುವ ಸುಳ್ಯ ತಾಲೂಕಿನ, ದಪ್ಪ ಚರ್ಮದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು,ಇಡೀ ತಾಲೂಕಿನಲ್ಲಿ ಅತೀ ದೊಡ್ಡ ಸಮಸ್ಯೆಯನ್ನು ಪರಿಹರಿಸಿದಲ್ಲಿ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದು.
ಅಥವಾ ಇಡೀ ಸುಳ್ಯ ತಾಲೂಕಿನ ಜನರ ಪ್ರತಿನಿಧಿ ಆಗಿರುವ ನಮ್ಮ ಶಾಸಕರ ಆಜ್ಞೆ ಇದ್ದರೂ,ಸುಳ್ಯ ತಾಲೂಕಿನ ಹಿರಿಯ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಅನ್ನೋದಾದ್ರೆ,ಅಥವಾ ಇದೆಲ್ಲ ಸುಳ್ಯ ತಾಲೂಕಿನ ಅಧಿಕಾರಿಗಳಿಗೆ,ಸಾಧ್ಯ ಆಗುವುದಿಲ್ಲ ಅಂತ ಆದ್ರೆ, ಇಡೀ ಸುಳ್ಯ ತಾಲೂಕಿನಲ್ಲಿ ಆಧಾರ್ ಕಾರ್ಡ್ ಇಲ್ಲದೆ, ಸರಕಾರಿ ಕೆಲಸ ಆಗುವಂತಹ ಆಜ್ಞೆ ನೀಡಿದಲ್ಲು ಸಮಸ್ಯೆ ಪರಿಹಾರ ಆಗಬಹುದಲ್ಲವೇ?
ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ದಯವಿಟ್ಟು ಗಮನ ಹರಿಸಿ,ಸುಳ್ಯ ತಾಲೂಕಿನ ಜನರ ಕಷ್ಟಗಳಿಗೆ, ಪರಿಹಾರ ನೀಡಿ
✍️ ರಿಯಾಝ್ ಕಟ್ಟೆಕ್ಕಾರ್ ಸದಸ್ಯರು, ನಗರ ಪಂಚಾಯತ್, ಸುಳ್ಯ 9945542103
.
.