ಸುಳ್ಯ ತಾಲೂಕು ಆಸ್ಪತ್ರೆಯ 108 ಆಂಬುಲೆನ್ಸ್ ಕಳೆದ ಮೂರು ದಿನದಿಂದ ಗಾಡಿಯ ಟೈಯರ್ ಸಮಸ್ಯೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.
ಡ್ಯೂಟಿ ರೋಸ್ಟರ್ ಕೂಡ ಚೇಂಜ್ ಆಗಿ ಇನ್ನಷ್ಟು ಸಾರ್ವಜನಿಕ ವಲಯಗಳಲ್ಲಿ ತೊಂದರೆಗಳು ಉಂಟಾಗಿದೆ ಇದರ ಬಗ್ಗೆ ಸಚಿವರು ಆದಷ್ಟು ಬೇಗ ಗಮನ ಹರಿಸಬೇಕಾಗಿದೆ.
108 ಆಂಬುಲೆನ್ಸ್ ಜವಾಬ್ದಾರಿ ಹೊತ್ತಿರುವ ಗ್ರೀನ್ ಹೆಲ್ತ್ ಸರ್ವಿಸ್, ಇ ಎಂ ಅರ್ ಐ ಏಕ ಏಕಿಯಾಗಿ ಡ್ಯೂಟಿ ರೂಸ್ಟರ್ ಚೇಂಜ್ ಮಾಡಿದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸಾರ್ವಜನಿಕರಿಗೆ 108 ಸೇವೆಯಲ್ಲಿ ತೊಂದರೆ ಯಾಗುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಆರೋಗ್ಯ ಸಚಿವರು ಗಮನ ಹರಿಸಬೇಕಾಗಿದೆ. ಈ ಬಗ್ಗೆ ಕರ್ತವ್ಯದಲ್ಲಿರುವ ಸಿಬ್ಬಂದಿಗಳನ್ನು ಸಂಪರ್ಕ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.