ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪಾರ್ಟಿಗೆ ಬಂದಿದ್ದ ಪ್ರಿಯತಮನಿಗೆ ಚೂರಿಯಿಂದ ಇರಿದ ಘಟನೆ ಬುಧವಾರ ನಡೆದಿದೆ.
ಮನುಕುಮಾರ್ (25) ಚಾಕು ಇರಿತಕ್ಕೊಳಗಾದ ಯುವಕ. ಈತನಿಗೆ ಪ್ರಿಯತಮೆ ಭವಾನಿ ಚಾಕುವಿನಿಂದ ಇರಿದಿದ್ದಾಳೆ. ಪ್ರಿಯತಮೆ ಹಾಗೂ ಮನುಕುಮಾರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲವು ದಿನಗಳಿಂದ ಅವರು ವೈಮನಸ್ಸಿಂದ ದೂರವಾಗಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿದ ಸಂದರ್ಭದಲ್ಲಿ ಮನುಕುಮಾರ್ ಮನೆಗೆ ತೆರಳುತ್ತಿದ್ದ ವೇಳೆ ಯುವತಿ ಮನುಕುಮಾರಿಗೆ ಚಾಕು ಇರಿದಿದ್ದಾಳೆ.