ಅರಂತೋಡು: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮ ಪ್ರವೇಶ ಮಾಡಿ ಹೊಸ ವರ್ಷ ಆಚರಣೆ ಮಾಡಿ ಪಾರ್ಟಿ ಮಾಡಲು ತಯಾರು ಮಾಡುತ್ತಿದ್ದ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟ ಘಟನೆ ಬುಧವಾರ ವರದಿಯಾಗಿದೆ.
ಮಂಗಳವಾರ ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ ಯುವಕರು ಅರಣ್ಯ ಇಲಾಖೆಯ ವಶವಾಗಿದ್ದರು ಎನ್ನಲಾಗಿದೆ.
ಆಲೆಟ್ಟಿ ಗ್ರಾಮದ ಜಗದೀಶ ಎಂಬರ ಮಗ ರೋಶನ್ .ಕೆ(27),ಪೆರಾಜೆ ಗ್ರಾಮದ ಸುರೇಶ್ ಎಂಬವರ ಮಗ ಮನು(39),ಗಂಗಾಧರ ಎಂಬವರ ಮಗ ಪಿ.ಜಿ ಜೀತನ್ (21),ಸಂಪಾಜೆ ಗ್ರಾಮದ ಗೂನಡ್ಕ ನಿವಾಸಿ ಹಿಮಕರ ಎಂಬರ ಮಗ ಹರ್ಷಿತ್ ಹೆಚ್.ಟಿ(38),ಮಂಡೆಕೋಲು ಗ್ರಾಮಾದ ಚಂದ್ರಶೇಖರ್ ಎಂಬವರ ನಿತಿನ್ (19),ಅಡ್ಕಾರ್ ಚಂದ್ರಶೇಖರ ಎಂಬವರ ಮಗ ಸಚಿನ್ (26),ಪೆರಾಜೆ ಗ್ರಾಮದ ಲೋಕಯ್ಯ ಸಿ.ಎಸ್ ಎಂಬರ ಸಂಜಯ್ (22) ,ಜಾಲ್ಸೂರು ಗ್ರಾಮದ ಜನಾರ್ದನ ಗೌಡ ಎಂಬರ ಮಗ ಶ್ರವನ್ ಕೆ.ಜೆ,ಸುಳ್ಯದ ಚಂದ್ರು ಎಂಬವರ ಮಗ ಸಂಪ್ರಿತ್ (29), ಶಿವಪ್ರಕಾಶ್ ಎಂಬವರ ಮಗ ಆಶಿತ್ ಎ.ಎಸ್,(28),ರಾಮಚಂದ್ರ ಎಂಬವರ ಮಗ ಕಿರ್ತನ್ ಎ.ಆರ್ (26),ಉತ್ತಪ್ಪ ಡಿ.ಸಿಯವರ ಮಗ ಮೋಕ್ಷಿತ್ ಡಿ.ಯು,(23)ದಯಾನಂದ ಎಂಬವರ ಮಗ ಉಪದೇಶ್.ಕೆ(29),ದಿನೇಶ್ ಕೆ ಎಂಬವರ ಮಗ ದಿಶಾಲ್.ಕೆ(26),ಪೆರಾಜೆಯ ಚಂದ್ರಶೇಖರ ಕೆ.ಆರ್ ಎಂಬವರ ಮಗ ಧನಂಜಯ ಕೆ.ಸಿ (24),ಕಡಬದ ಕೊರಗಪ್ಪ ನಾಯ್ಕ ಎಂಬವರ ಮಗ ಸುನೀಶ್.ಜಿ(29),ಪೆರಾಜೆಯ ಲಿಂಗಪ್ಪ ನಾಯ್ಕ ಎಂಬವರ ಮಗ ಶ್ರೀಧರ .ಸಿ(32)ವಿಟ್ಲದ ಈಶ್ವರ್ ನಾಯಕ್ ಎಂಬವರ ಮಗ ಮಹೇಶ್ ನಾಯಕ್( 21),ನೆಲ್ಲೂರು ಗ್ರಾಮದ ರಾಮಚಂದ್ರ ಎಂಬವರ ಮಗ ಶಶಿಕಾಂತ(24)ಆಲೆಟ್ಟಿ ಗ್ರಾಮದ ಚೆನ್ನಪ್ಪ ನಾಯಕ ಎಂಬವರ ಮಗ ಮುರಳಿಧರ್ ಪಿ.ಸಿ (25) ಪೆರಾಜೆ ಗ್ರಾಮದ ಗಂಗಾಧರ ನಾಯಕ್ ಮಗ ಜೀವಿತ್ ಕೆ.ಜಿ (27),ನಾರಾಯಣ ನಾಯಕ್ ಎಂಬವರ ಮಗ ಮನೋಜ್ ಸಿ.ಎನ್ (,27),ಗೂನಡ್ಕದ ವಿಶ್ವನಾಥ ಎಂಬವರ ಮಗ ಪವನ್ ಕುಮಾರ್ ಜಿ(27),ಸುಳ್ಯದ ಬಾಲಕೃಷ್ಣ .ಡಿ ಎಂಬವರ ಮಗ ಹರಿಶ್ಚಂದ್ರ .ಕೆ(29)ಅಲಂಕಾರು ಗ್ರಾಮದ ವಿಶ್ವನಾಥ ಎಂಬವರ ಮಗ ಶಿವಪ್ರಸಾದ(20),ಲಿಂಗಪ್ಪ ನಾಯಕ ಎಂಬವರ ಮಗ ಜಯಪ್ರಕಾಶ್.ಜಿ (30),ಪೆರಾಜೆಯ ಬಾಬು ಎಂಬವರ ಮಗ ಪ್ರದೀಪ್ ಪಿ.ಬಿ (20),ಪುರುಶೋತ್ತಮ ಎಂಬವರ ಮಗ ದರ್ಶನ್ ಪಿ.ಪಿ (20),ಪುರುಶೋತ್ತಮ ಬಿ.ಕೆ ಎಂಬವರ ಮಗ ನಿತಿನ್ ಬಿ.ಪಿ(23),ಬೋಜಪ್ಪ ಎಂಬವರ ಮಗ ಆಕಾಶ್ (21) ಗರಗುಂಜ ಎಂಬವರನ್ನು ಮೀಸಲು ಅರಣ್ಯದೊಳಗೆ ಮುಂದೆ ಅಕ್ರಮ ಪ್ರವೇಶ ಮಾಡಬೇಡಿ ಎಂದು ಹೇಳಿ ಎಚ್ಚರಿಕೆ ನೀಡಿ ಅರಣ್ಯಾಧಿಕಾರಿಗಳು ಕಳುಹಿಸಿ ಕೊಟ್ಟಿದ್ದಾರೆ.