ಕೇರಳ ರಾಜ್ಯ ಹೊರತುಪಡಿಸಿ ಯಾವುದೇ ರಾಜ್ಯ ಕಸ್ತೂರಿ ರಂಗನ್ ವರದಿ ಬಗ್ಗೆ ಫಿಸಿಕಲ್ ಸರ್ವೆ ನಡೆಸಿ ವರದಿ ನೀಡಿಲ್ಲ ,ಫಿಸಿಕಲ್ ಸರ್ವೆ ನಡೆಸಿದ್ದಾಗ ಮಾತ್ರ ಅದರ ಯಥಾ ಸ್ಥಿತಿ ತಿಳಿಯಲಿದೆ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಾಧ್ಯಮ ಕೈಗಾರಿಕಾ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕಡಬ ತಾಲೂಕಿನ ಕೇರ್ಪಡದಲ್ಲಿ ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದರು
ಇದು ಹಿಂದಿನವರು ಮಾಡಿರುವ ತಪ್ಪು. ಏರಿಯಲ್ ಸರ್ವೆ ಮಾಡಿ ಈ ವರದಿ ಮಾಡಲಾಗಿದೆ. ಫಿಸಿಕಲ್ ಸರ್ವೆ ಮಾಡಬೇಕು. ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಎಷ್ಟು ತೋಟ ಇದೆ, ಎಷ್ಟು ಕಾಡು ಎಂಬ ಸರ್ವೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ ಕಸ್ತೂರಿ ರಂಗನ್ ವರದಿ ಸರ್ವೆ ಮಾಡಿರುವುದು ಹೆಲಿಕಾಪ್ಟರ್ ಮೂಲಕ ಎಂದ ಅವರು, ಎಲ್ಲಿ ಕಾಫಿ, ಅಡಿಕೆ, ತೆಂಗಿನ ಮತ್ತಿತರ ತೋಟ ಇದೆಯೋ ಅಲ್ಲಿ ಹಸುರು ಬಂದಿದೆ. ಈ ಕಾರಣದಿಂದ ಈ ಎಲ್ಲವನ್ನೂ ಕಾಡು ಎಂದು ಅವರು ತೀರ್ಮಾನ ಮಾಡಿದ್ದಾರೆ. ಇದು ತಪ್ಪು ಎಂಬುದನ್ನು ನಾವು ಬಹಳ ಹಿಂದೆಯೇ ತಿಳಿಸಿದ್ದೆವು ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ತಿಳಿಸಿದ್ದೆವು. ಆದರೆ ಕೇರಳ ಒಂದೇ ರಾಜ್ಯ ಫಿಸಿಕಲ್ ಸರ್ವೆ ಮಾಡಿ ವರದಿ ನೀಡಿದೆ. ಕರ್ನಾಟಕದಲ್ಲಿ ಮಾತ್ರ ಈವರೆಗೆ ಯಥಾಸ್ಥಿತಿಯಲ್ಲಿ ಫಿಸಿಕಲ್ ಸರ್ವೆ ಆಗಿಲ್ಲ. ಫಿಸಿಕಲ್ ಸರ್ವೆ ಮಾಡಿದಾಗ ಮಾತ್ರ ಈ ಭಾಗದಲ್ಲಿರುವ ತೋಟ, ವಿದ್ಯಾಸಂಸ್ಥೆ, ಕಲ್ಚರಲ್ ಸೆಂಟರ್, ಕಾಡು, ತೋಟ ಇರುವುದು ತಿಳಿಯುತ್ತದೆ ಎಂದರು.