ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದುದು.ಹಿಂದು ಧರ್ಮ ಸನಾತನ ಧರ್ಮವಾಗಿದೆ ಎಂದು ಮಾಜಿ ಸಂಸದ ನಳೀನ್ ಕುಮಾರ್ ಹೇಳಿದರು.
ಅವರು ಕೇರ್ಪಡ ಮಹಿಷಮರ್ದಿನೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಜ.2ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
.ನಮ್ಮ ಹಿಂದೂ ಧರ್ಮದ ಧಾರ್ಮಿಕ ವಿಚಾರಧಾರೆಗಳಿರುವ ಸಂಸ್ಕಾರದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜಿಲ್ಲೆಯ ಏಕೈಕ ದೇವಸ್ಥಾನ ಕೇರ್ಪಡ ಮಹಿಷಮರ್ದಿನೀ ಕ್ಷೇತ್ರ. ಇಂತ ಕೆಲಸಗಳನ್ನು ದೇವಸ್ಥಾನಗಳು ನಿರಂತರವಾಗಿ ಮಾಡಬೇಕಾಗಿದೆ”. ಎಂದು ಅವರು ಹೇಳಿದರು.
ಪ್ರಕೃತಿಯ ಆರಾಧನೆಯ ಮೂಲಕ ಭಗವಂತನ್ನು ನಂಬುವುದು ಇಲ್ಲಿ ವಿಶೇಷತೆ” ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಿಶ್ವಸ್ಥ ಮಂಡಳಿ ಅಧ್ಯಕ್ಷ ಚಂದ್ರಶೇಖರ ತಳೂರು, ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಶ್ರೀ ಮುತ್ತಪ್ಪ ದೈವಸ್ಥಾನದ ಅಧ್ಯಕ್ಷ ವೆಂಕಟ್ ವಳಲಂಬೆ, ರಾಜ್ಯ ಮೀನುಗಾರಿಕಾ ನಿಗಮ ಮಾಜಿ ಅಧ್ಯಕ್ಷ ಎ.ವಿ. ತೀರ್ಥರಾಮ, ಪೆರುವಾಜೆ ಜಲದುರ್ಗ ದೇವಸ್ಥಾನ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ. ಉಪಸ್ಥಿತರಿದ್ದರು.