ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಿರಂತರ ಮೂರು ದಿನಗಳ ಕಾಲ ನಡೆಯುವ ವಸಂತ ಸಂಭ್ರಮ ಕಾರ್ಯಕ್ರಮವು ಅದ್ದೂರಿ ಶೈಕ್ಷಣಿಕ ದಿಬ್ಬಣದೊಂದಿಗೆ ಪ್ರಾರಂಭಗೊಂಡಿತು. ಬೆಳ್ಳಾರೆ ಬಸ್ಟೇಂಡ್ ಸಮೀಪ ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ಡಿ. ಯವರು ತೆಂಗಿನಕಾಯಿ ಒಡೆಯುವುದರ ಮೂಲಕ ಶೈಕ್ಷಣಿಕ ದಿಬ್ಬಣಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಸಂತ ಸಂಭ್ರಮ ಸಮಿತಿ ಸಂಚಾಲಕ ಎಸ್.ಎನ್.ಮನ್ಮಥ,ಅಧ್ಯಕ್ಷೆ ರಾಜೀವಿ ಆರ್.ರೈ.ಶಾಲಾ ಎಸ್.ಡಿ.ಎಂ.ಉಪಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಕೆಪಿಎಸ್ ಪ್ರಾಂಶುಪಾಲ ಜನಾರ್ಧನ ಕೆ.ಎನ್.ಉಪಪ್ರಾಂಶುಪಾಲೆ ಉಮಾಕುಮಾರಿ,ಮುಖ್ಯ ಗುರು ಮಾಯಿಲಪ್ಪ ಹಾಗೂ ಸಮಿತಿಯ ಪದಾಧಿಕಾರಿಗಳು,ಒಸಾಟ್ ಸಂಸ್ಥೆಯ ಅಧಿಕಾರಿಗಳು ಹಾಗು ಸಾವಿರಾರು ಜನರು ಭವ್ಯವಾದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವಿಧ ವೇಷಭೂಷಣಗಳು,ವಾದ್ಯ,ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಮೆರುಗು ನೀಡಿತ್ತು.
ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.