ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಧುಗಿರಿ ಡಿವೈಎಸ್ಪಿಯ ಬಂಧನ!ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಡಿವೈಎಸ್ಪಿ

ದೂರು ನೀಡಲು ಡಿವೈಎಸ್ಪಿ ಕಚೇರಿಗೆ ಬಂದ ನೊಂದ ಮಹಿಳೆಯೊಬ್ಬರ ಮೇಲೆ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ನೀಚ ಕೆಲಸವನ್ನು ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಎಸಗಿದ್ದು ಮಧುಗಿರಿ ಪೊಲೀಸರು ಡಿವೈಎಸ್ಪಿಯನ್ನು ಬಂಧಿಸಿದ್ದಾರೆ.
ಈ ಕ್ರತ್ಯದ ವಿಡಿಯೋ ಮಾದ್ಯಮಗಳಿಗೆ ದೊರಕಿದೆ.ಈ ಹೇಯ ಕ್ರತ್ಯದಿಂದ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.
ಮಧುಗಿರಿ DYSP ರಾಮಚಂದ್ರಪ್ಪರು ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ತನ್ನ ಕಚೇರಿಯಲ್ಲಿನ ಏಕಾಂತ ಗೃಹ ಅಥವಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದು ಅನೈತಿಕ ಚಟುವಟಿಕೆ ಆರಂಭಿಸಿದ್ದಾನೆ. ಕಿಟಕಿಯ ಮೂಲಕ ಚಿತ್ರೀಕರಣಗೊಂಡ ವಿಡಿಯೋ ಮಾದ್ಯಮಗಳಿಗೆ ದೊರೆತ್ತಿವೆ.
ಇದೊಂದು ಪೊಲೀಸ್ ಇಲಾಖೆಯ ಗೌರವವನ್ನು ಮಣ್ಣುಪಾಲು ಮಾಡುವಂತ ನೀಚ ಕೃತ್ಯವಾಗಿದ್ದು ಗೃಹ ಸಚಿವರ ತವರು ಜಿಲ್ಲೆ ಹಾಗೂ ಸಹಕಾರ ಸಚಿವರ ಕ್ಷೇತ್ರದಲ್ಲೇ ನಡೆದಿದ್ದು ಇಬ್ಬರೂ ಸಚಿವರಿಗೆ ಮುಜುಗರ ತಂದಿದೆ.

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top