ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಿ ದೇವಸ್ಥಾನಕ್ಕೆ ಸೇರಿದ ದೇವಳದ ಸಮೀಪದಲ್ಲಿರುವ ತೀರ್ಥ ಕೆರೆ ಪವಿತ್ರ ಪುಷ್ಕರಿಣಿ ಅಭಿವೃದ್ಧಿಗೊಂಡು ಜ.03 ರಂದು ಲೋಕಾರ್ಪಣೆಗೊಂಡಿದೆ. ಪವಿತ್ರ ಕೆರೆಯಲ್ಲಿ ಗಂಗಾಪೂಜೆ, ಗಂಗಾರತಿ, ದೀಪೋತ್ಸವ ಹಾಗೂ ಕ್ಷೇತ್ರದಲ್ಲಿ ಗೋಪೂಜೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ನಡೆಯುತ್ತಿದೆ.
ಜ.06 ರಂದು ಪೂ. ಗಂಟೆ 8-23 ರಿಂದ 09-23 ವರೆಗೆ ಮಕರ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನೀ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಪವಿತ್ರವಾದ ಈ ತೀರ್ಥಕೆರೆಯ ಜಲದಲ್ಲಿ ಔಷಧೀಯ ಗುಣಗಳು ಇದೆ ಎಂದು ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದಿದೆ. ಈ ಪವಿತ್ರ ಪುಷ್ಕರಣಿಯಲ್ಲಿ ತೀರ್ಥಸ್ನಾನ ಮಾಡಿದರೆ ಸಕಲ ಚರ್ಮರೋಗ ನಿವಾರಣೆಯಾಗುತ್ತದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆಗಳು ಅನೇಕ ಇದೆ. ಇದೀಗ ಪವಿತ್ರವಾದ ತೀರ್ಥಕೆರೆಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಪವಿತ್ರ ಪುಷ್ಕರಣಿಯ ಅಡಿಭಾಗದಿಂದ 7 ಅಡಿ ಎತ್ತರದ ತನಕ ಶಿಲಾಮಯಗೊಳಿಸಲಾಗಿದೆ. ಹಂತ ಹಂತವಾಗಿ ಮೆಟ್ಟಿಲುಗ ನಿರ್ಮಿಸಲಾಗಿದೆ. ಕೆರೆಗೆ 33 ಸಾವಿರ ಕೆಂಪು ಕಲ್ಲನ್ನು ವಿನಿಯೋಗಿಸಲಾಗಿದೆ.ಸುಮಾರು 30 ಲಕ ವೆಚ.ದಲಿ ಕೆರೆಯನ್ನು ಪುನರುತ್ಥಾನ ಮಾಡಲಾಗಿದೆ.
ಅಲ್ಲದೆ ಹೊರಭಾಗದಲ್ಲಿ ಸುತ್ತಲೂ ಆಕರ್ಷಕ ಉದ್ಯಾನವನ ಮತ್ತು ವಿದ್ಯುದ್ದೀಪಾಲಂಕಾರ ಮಾಡಲಾಗಿದೆ.
ಈ ಪವಿತ್ರ ಪುಷ್ಕರಣಿಯಿಂದ ತೀರ್ಥಜಲದಲ್ಲಿ ಭಕ್ತರು ಕಲಶ ಸ್ನಾನ ಮಾಡಲು ಬೇಕಾದ ವ್ಯವಸ್ಥೆ ಮಾಡಲು ಆಡಳಿತ ಚಿಂತನೆ ಮಾಡಿದೆ. ತೀರ್ಥ ಸ್ನಾನದಿಂದ ಪಾವನತೆ ಲಭ್ಯವಾಗಲಿದೆ. ಇದರ ಪಕ್ಕದಲ್ಲಿ ಪವಿತ್ರ ತೀರ್ಥಬಾವಿಯನ್ನು ಕೂಡಾ ಪುನರ್‌ನಿರ್ಮಿಸಲಾಗಿದೆ.