ತಾಯಿ ಭಾರತ ಮಾತೆಗೆ ತಾಯಿಯ ಸ್ಥಾನವಿದೆ.ತ್ಯಾಗ, ಸೇವೆ ಭಾರತದ ಆದರ್ಶಗಳಲ್ಲಿ ಒಂದು. ಸನಾತನ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು. ನಮ್ಮತನ ಮರೆತರೆ ನಮಗೆ ಭವಿಷ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿಯವರು ನುಡಿದರು.
ಶ್ರೀ ಮಹಿಷಮರ್ದಿನೀ ದೇವಸ್ಥಾನ ಕೇರ್ಪಡ ಇಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಇದರ ಅಂಗವಾಗಿ
ಪ್ರಯುಕ್ತ ಜ. ೩ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಉಪನ್ಯಾಸ ನೀಡಿದ ವಾಗ್ಮಿ ಹಾರಿಕಾ ಮಂಜುನಾಥ್ ಅವರು ಮಾತನಾಡಿ ಧರ್ಮಜಾಗೃತಿಯ ಮೂಲಕ ದೇಶದ ಜಾಗೃತಿಯಾಗಬೇಕು. ಕುಟುಂಬ ಮೌಲ್ಯಗಳ ಮೂಲಕ ಮನೆಯನ್ನು ಅಂತಹ ಮನೆಯ ಮೂಲಕ ಸಮಾಜವನ್ನು, ಅಂತಹ ಸಮಾಜದ ಮೂಲಕ ದೇಶವನ್ನು ಬದಲಾಯಿಸಲು ಸಾಧ್ಯವಿದೆ. ಮನೆಯ ಮಕ್ಕಳನ್ನು ನೈಜ ಹಿಂದೂವಾಗಿ ಬೆಳೆಸುವ ಮೂಲಕ ಜಾಗೃತಿಗೊಳಿಸಬೇಕು ಎಂದು ಹೇಳಿದರು ಎಂದು ಹೇಳಿದರು.
ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞೆ
ಡಾ.ಪದ್ಮಪ್ರಕಾಶ್, ಸುಳ್ಯ ತಹಶೀಲ್ದಾರ್ ಮಂಜುಳಾ, ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸದಸ್ಯೆ ಇಂದಿರಾ ಬಿ.ಕೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಂತಿಕಲ್ಲು ವಲಯ ಮೇಲ್ವಿಚಾರಕಿ
ಹೇಮಲತಾ, ಮುರುಳ್ಯ ಎಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಕೆ.ಜಿ. ಕುಸುಮಾತಿ ರೈ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಸುವರ್ಣ ಬಾಮೂಲೆ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ದಿವ್ಯಾ ಯೋಗಾನಂದ, ಎಡಮಂಗಲ ಗ್ರಾ.ಪಂ. ಪಿ.ಡಿ.ಒ. ಭವ್ಯಾ ಎಂ.ಬಿ. ಮುಖ್ಯ ಅತಿಥಿಗಳಾಗಿದ್ದರು. ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಗ್ಯಪ್ರಸನ್ನ ಎಣ್ಣೂರು ವಾರಿಜಾಕ್ಷಿ ಕೇರ್ಪಡ ಉಪಸ್ಥಿತರಿದ್ದರು.
ಅಂಬಾರಿ ಕ್ರಿಯೇಷನ್ ಮೂಲಕ ಕೆ.ಟಿ.ತಿಮ್ಮಪ್ಪ ಅವರು
ನಿರ್ಮಿಸಿದ ಕೇರ್ಪಡದ ಅರಸಿ ಎಂಬ ತುಳು ಭಕ್ತಿಗೀತೆಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಕು. ತೃಷಾ ಪ್ರಾರ್ಥಿಸಿದರು. ಭಾಗ್ಯಪ್ರಸನ್ನ ಸ್ವಾಗತಿಸಿ ದಿವ್ಯಾ ಯೋಗಾನಂದ ವಂದಿಸಿದರು. ಮಧು ಯತೀಶ್ ಕಾರ್ಯಕ್ರಮ ನಿರೂಪಿಸಿದರು.