ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03 ರಂದು ವಸಂತ ಸಂಭ್ರಮ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ಪ್ರಾರಂಭಗೊಂಡಿದ್ದು ಜ.5 ರವರೆಗೆ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ ಶೈಕ್ಷಣಿಕ ದಿಬ್ಬಣ ನಡೆದ ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಚಾಲನೆ ನೀಡಲಾಯಿತು.ಒಸಾಟ್ ಪ್ರಾಯೋಹಕತ್ವದಲ್ಲಿ 1.5 ಕೋಟಿ ರೂ ನಿರ್ಮಾಷವಾದ 8 ತರಗತಿ ಕೊಠಡಿಗಳು,ನವೀಕೃತ ಕ್ರೀಡಾಂಗಣ ಉದ್ಘಾಟನೆಗೊಂಡಿತು.
ನವೀಕೃತ ಕ್ರೀಡಾಂಗಣವನ್ನು ಹಿರಿಯರಾದ ಮಂಜುನಾಥ ಆಳ್ವ ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್.ರೈ ಧ್ವಜಾರೋಹನ ನೆರವೇರಿಸಿದರು.
ಸ್ಟಾಲ್ ನ್ನು ಒಸಾಟ್ ಸಂಸ್ಥೆಯ ಚೆಯರ್ ಮೆನ್ ಬಿ.ವಿ.ಜಗದೀಶ್, ವಸಂತ ಸಂಭ್ರಮ ಸಮಿತಿ ಸಂಚಾಲಕ ಎಸ್.ಎನ್ .ಮನ್ಮಥ,ಅಧ್ಯಕ್ಷೆ ರಾಜೀವಿ ಆರ್.ರೈಯವರು ತೆಂಗಿನಕಾಯಿ ಒಡೆಯುವ ಮುಖಾಂತರ ಉದ್ಘಾಟಿಸಿದರು.
ಒಸಾಟ್ ಪ್ರಾಯೋಜಕತ್ವದ ಕೊಠಡಿಗಳನ್ನು ಒಸಾಟ್ ಸಂಸ್ಥೆಯ ಚಯರ್ ಮೆನ್ ಬಿ.ವಿ.ಜಗದೀಶ್ ಉದ್ಘಾಟಿಸಿದರು.
ಶಾಲಾ ಕೊಠಡಿಗಳನ್ನು ಶಾಸಕಿ ಭಾಗೀರಥಿ ಮುರುಳ್ಯ,ಹರೇಕಳ ಹಾಜಬ್ಬರವರು ಉದ್ಘಾಟಿಸಿದರುಈ ಸಂದರ್ಭದಲ್ಲಿ ವಸಂತ ಸಂಭ್ರಮ ಸಮಿತಿ ಗೌರವಸಧ್ಯಕ್ಷ ನಳಿನ್ ಕುಮಾರ್ ಕಟೀಲ್,ಸಂಚಾಲಕ ಎಸ್.ಎನ್.ಮನ್ಮಥ,ಅಧ್ಯಕ್ಷೆ ರಾಜೀವಿ ಆರ್.ರೈ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ,ಶಾಲಾ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶ್ರೀನಾಥ ರೈ ಬಾಳಿಲ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಶಾಲಾಭಿಮಾನಿಗಳು,ಗಣ್ಯರು ಉಪಸ್ಥಿತರಿದ್ದರು.