ಮಂಡೆಕೋಲು ಗ್ರಾಮದ ಪೇರಾಲು ಕುಕ್ಕುಡೇಲು ನಿವಾಸಿ ಶೀನಪ್ಪ ಗೌಡರು ಜ.4ರಂದು ಮುಂಜಾನೆ ನಿಧನರಾದರು.
ಅವರಿಗೆ 87 ವರ್ಷ ಪ್ರಾಯವಾಗಿತ್ತು.
ಡಿ.4ರಂದು ಮುಂಜಾನೆ ಅಸ್ವಸ್ಥಗೊಂಡ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಕೃಷಿಕರಾಗಿದ್ದ ಅವರು ಪತ್ನಿ ಗಿರಿಜಾ, ಪುತ್ರರಾದ ನವೀನ್ ಕುಮಾರ್ ಕುಕ್ಕುಡೇಲು, ಉದಯಕುಮಾರ್ ಕುಕ್ಕುಡೇಲು, ಪುತ್ರಿಯರಾದ ಗೀತಾಂಜಲಿ, ತಾರಕೇಶ್ವರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.