ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಗಳಿಗೆ ಮಾತ್ರ ಏಕೆ ? : ಪ್ರಭಾಕರ ಭಟ್ ಕಲ್ಲಡ್ಕ ಪ್ರಶ್ನೆ

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಕ್ಕೆ ಮಾತ್ರ ಏಕೆ ? ಪ್ರಾಣತ್ಯಾಗ ಮಾಡಿದ ತಾಯಂದಿರ ಇತಿಹಾಸ ಜಗತ್ತಿನಲ್ಲಿದ್ದರೆ ಅದು ಭಾರತದಲ್ಲಿ ಮಾತ್ರ, ಅಂತಹ ತಾಯಿಯನ್ನು ಮಹಿಷಮರ್ದಿನಿ ರೂಪದಲ್ಲಿ ಇಂದು ನಾವು ಕಾಣುತ್ತಿದ್ದೇವೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಅವರು ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನದ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.ವಿಶಾಲ ಧರ್ಮ ಸಂಸ್ಕೃತಿ ನಮ್ಮದು, ಭಾರತದ ಮೇಲೆ ಇಲ್ಲಿಯ ಸಂಸ್ಕೃತಿಯ ಮೇಲೆ ಹಲವು ಭಾರಿ ಆಕ್ರಮಣಗಳು ನಡೆದಿದೆ. ಇಂದಿಗೂ ದೇವಸ್ಥಾನಗಳ ಮೇಲೆ ಸರಕಾರಗಳು ಕಪಿಮುಷ್ಟಿ ಹೊಂದಿದೆ.ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದುಗಳಿಗೇ ಮಾತ್ರ ಯಾಕೆ. ಈ ಕಾನೂನುಗಳು ಬರುವ ಮೊದಲೇ ಭಾರತದಲ್ಲಿ ದೇವಸ್ಥಾನಗಳಿತ್ತು. ಭಾರತೀಯ ದೇವಸ್ಥಾನಗಳಿಗೆ ಸಾವಿರಾರು ವರ್ಷ ಇತಿಹಾಸವಿದೆ. ಚರಿತ್ರೆಗಳನ್ನು ವಿಕಾರಗೊಳಿಸಲಾಗುತ್ತಿದೆ.ಹಿಂದೂ ಸಮಾಜ ಸೊರಗುತ್ತಿದೆ, ನಮ್ಮ ಧರ್ಮ ಉಳಿಸುವ ಕೆಲಸ ಮನೆ ಮನಗಳಲ್ಲಿ ಆಗಬೇಕು ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅದ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ ಕೇರ್ಪಡದಲ್ಲಿ ದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವ ಮಾಡುವುದರ ಮೂಲಕ ಧಾರ್ಮಿಕ ಜಾಗೃತಿಗೆ ವೇಗ ದೊರೆತಿದೆ. ಗ್ರಾಮ ಗ್ರಾಮದಲ್ಲಿ ಹಿಂದೂ ಧರ್ಮದ ಶೃದ್ದಾ ಕೇಂದ್ರಗಳು ತೆರೆಯುವಂತಾಗಬೇಕು.ಸತ್ಯ ಧರ್ಮದ ತಳಹದಿಯಾಗಿದೆ. ನಡೆ ನುಡಿ ಒಂದಾಗಿದ್ದರೆ ಧರ್ಮ ನಿರ್ಮಾಣ ಸಾಧ್ಯ. ಯುವ ಜನತೆಯಲ್ಲಿ ತಂತ್ರ ಜ್ಞಾನದೊಂದಿಗೆ ತತ್ವ ಜ್ಞಾನವೂ ಹೆಚ್ಚಾಗಬೇಕಾಗಿದೆ, ಧರ್ಮ ಶಿಕ್ಷಣ ದೊರೆತಾಗ ಬದುಕಿನಲ್ಲಿ ತೃಪ್ತಿ ಹೊಂದಲು ಸಾಧ್ಯ ಎಂದು ಆಶೀರ್ವಚನ ಮಾಡಿದರು.
ಮುಖ್ಯ ಅತಿಥಿಗಳಾಗಿ ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ, ಬೆಂಗಳೂರು ಹಿರಿಯ ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ಅಟಲ್ ಜಿ ಚಾರಿಟೇಬಲ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ಮಾಜಿ ಅದ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ರಾಜೇಂದ್ರ ಪ್ರಸಾದ್‌ ಶೆಟ್ಟಿ ಎಣ್ಣೂರು ಭಾಗವಹಿಸಿದ್ದರು.ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ವಸಂತ ನಡುಬೈಲು, ಭಜನಾ ಸಂಘದ ಅಧ್ಯಕ್ಷ ಸುಂದರ ಗೌಡ, ವ್ಯವಸ್ಥಾಪನಾ ಸಮಿತಿಯ ನಾರಾಯಣ ಎಂಜೀರು, ಸಾಯಿ ಪ್ರಸಾದ್ ಬೊಳ್ಳಾಜೆ, ಯೋಗಾನಂದ ಉಳಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ವಸಂತ ನಡುಬೈಲು ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಾವಿತ್ರಿ ಎಂಜೀರು ಪ್ರಾರ್ಥಿಸಿ,ಗಣೇಶ್ ನಡ್ವಾಳ್ ಕಾರ್ಯಕ್ರಮ ನಿರೂಪಿಸಿದರು

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top