ಇಂದು ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ! ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ,ಉಪಾಧ್ಯಕ್ಷರಾಗಿ ಡಾ‌.ಲಕ್ಷ್ಮೀಶ ಕಲ್ಲುಮುಟ್ಲು ಆಯ್ಕೆ ಸಾಧ್ಯತೆ ಬಹುತೇಕ ಖಚಿತ

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಲಿದ್ದು ಅಧ್ಯಕ್ಷರಾಗಿ ಎರಡುವರೆ ವರ್ಷದ ಅವಧಿಗೆ ಸಂತೋಷ್ ಕುತ್ತಮೊಟ್ಟೆ ಆಯ್ಕೆಯಾಗಲಿದ್ದರೆ ಎಂದು ತಿಳಿದು ಬಂದಿದೆ.
ಉಪಾಧ್ಯಕ್ಷರಾಗಿ ಯುವ ವೈದ್ಯ ಡಾ. ಲಕ್ಷ್ಮೀಶ ಕಲ್ಲುಮುಟ್ಲು ಆಯ್ಕೆಯಾಗಲಿದ್ದಾರೆ.
ಬಿಜೆಪಿ ಮಂಡಲ ನಾಯಕರುಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಾಗಿದೆ ಎಂದು ಪಕ್ಷದ ಮೂಲದಿಂದ ತಿಳಿದು ಬಂದಿದೆ.
ನಿರ್ದೇಶಕರುಗಳ ಸ್ಥಾನಕ್ಕೆ ಡಿ.28ರಂದು ನಡೆದ ಚುನಾವಣೆಯಲ್ಲಿ ಎಲ್ಲಾ 12 ನಿರ್ದೇಶಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸಂತೋಷ್ ಕುತ್ತಮೊಟ್ಟೆ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಸಾಧಿಸಿತ್ತು.
ಇಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸಂತೋಷ್ ಕುತ್ತಮೊಟ್ಟೆ 681, ದಯಾನಂದ ಕುರುಂಜಿ 637 ಚಂದ್ರಶೇಖರ ಚೋಡಿಪಣೆ 633, ಶಿವಾನಂದ ಕುಕ್ಕುಂಬಳ 599, ಉದಯಕುಮಾರ್ ಉಳುವಾರು 564 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಶಾಂತ್ ಕಾಪಿಲ 162 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಸಾಲಗಾರರ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾದ ಶ್ರೀಲತಾ ದೇರಾಜೆ 684 ಲೋಚನ ಕೊಳಲುಮೂಲೆ 623,ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿಯ ದಿನೇಶ್ ಅರಮನೆಗಯ 663 ಮತ, ಪರಿಶಿಷ್ಟ ಜಾತಿಯಿಂದ ಬಿಜೆಪಿಯ ಪದ್ಮಯ್ಯ ಅಡ್ಯಡ್ಕ 649 ,ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಬಿಜೆಪಿಯ ಚಂದ್ರಶೇಖರ ತೊಡಿಕಾನ 576 ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿಜೆಪಿಯ ಡಾ. ಲಕ್ಷ್ಮೀಶ ಕಲ್ಲುಮುಟ್ಟು 702 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top