ಜ.10ಕ್ಕೆ ಸುಳ್ಯ ಚೆನ್ನಕೇಶವ ದೇವರ ರಥೋತ್ಸವ

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ವೈಭವದಿಂದ ಜ.02 ರಿಂದ ಪ್ರಾರಂಭಗೊಂಡಿದ್ದು ಜ.12 ರವರೆಗೆ ನಡೆಯಲಿದೆ.
ಜ.07 ರಂದು ರಾತ್ರಿ ಶ್ರೀ ಉತ್ಸವ ಬಲಿ ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ಜ.08 ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ,ನಡುಬೆಳಗು,ಬಟ್ಟಲು ಕಾಣಿಕೆ ನಡೆಯಲಿದೆ.
ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ,ವಿವೇಕಾನನಂದ ವೃತ್ತ,ಹಳೆಗೇಟು,ಹೊಸಗದ್ದೆ ಕಟ್ಟೆ,ಅಮೃತಭವನ,ರಾಮಂಮಂದಿರ,ಜಟ್ಟಿಪಳ್ಳ ಕಟ್ಟೆ ಪೂಜೆಗಳು ನಡೆಯಲಿದೆ.
ಜ.09 ರಂದು ಬೆಳಿಗ್ಗೆ ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.
ರಾತ್ರಿ ಮಿತ್ತೂರು ದೈವಗಳ ಭಂಡಾರ ಬರುವುದು,ಕಾನತ್ತಿಲ ದೈವಗಳ ಭಂಡಾರ ಬರುವುದು ಬಳಿಕ ವಾಲಸಿರಿ ಉತ್ಸವ ನಡೆಯುವುದು.
ಜ.10 ರಂದು ಬೆಳಿಗ್ಗೆ ದೊಡ್ಡದರ್ಶನ ಬಲಿ,ಬಟ್ಟಲು ಕಾಣಿಕೆ ನಡೆಯಲಿದೆ.
ರಾತ್ರಿ ಕಲ್ಕುಡ ದೈವಗಳ ಭಂಡಾರ ಬರುವುದು ನಂತರ ಬ್ರಹ್ಮರಥೋತ್ಸವ ನಡೆಯಲಿರಿವುದು.
ಜ.11 ರಂದು ಬೆಳಿಗ್ಗೆ ಆರಾಟ ಬಾಗಿಲು ತೆರೆಯುವುದು, ಬೆಳಿಗ್ಗೆ ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಭಾರದ್ವಾಜಾಶ್ರಮ ಅರಂಬೂರು ವೇದ ಪಾಠಶಾಲಾ ವಿದ್ಯಾರ್ಥಿಗಳಿಂದ ವೇದಪಾರಾಯಣ ನಡೆಯಲಿರುವುದು
ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ಬಜಪ್ಪಿಲ ದೈವಗಳ ಭಂಡಾರ ಬರುವುದು.ಉತ್ಸವ ಬಲಿ ಜೊರಟು ಪಟ್ಟಣ ಸವಾರಿ,ಆರಕ್ಷಕ ಠಾಣಾ ಕಟ್ಟೆಯಿಂದ ಗಾಂಧಿನಗರ,ಅರಣ್ಯ ಇಲಾಖೆ,ಕೇರ್ಪಳ,ತಾಲೂಕು ಕಚೇರಿ,ಪಯಸ್ವಿನಿ ನದಿ ಬಳಿ ಕಟ್ಟೆಪೂಜೆಗಳು ನಡೆಯಲಿದೆ. ಬಳಿಕ ಅವಕೃತ ಸ್ನಾನವಾಗಿ ಬಂದು ದರ್ಶನ ಬಲಿ,ಬಟ್ಟಲು ಕಾಣಿಕೆ ಧ್ವಜಾವರೋಹಣ ನಡೆಯಲಿದೆ. ಜ.12 ರಂದು ಮಧ್ಯಾಹ್ನ ಸಂಪ್ರೋಕ್ಷಣೆ,ಮಂತ್ರಾಕ್ಷತೆ ನಡೆಯಲಿದೆ.

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top