ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಕಾಯರತೋಡಿ ಭಾಗದಲ್ಲಿ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿದ್ದು ಹುಚ್ಚು ನಾಯಿ ಇಬ್ಬರಿಗೆ ಅವರ ಮನೆಗಳಿಗೆ ತೆರಳಿ ಕಚ್ಚಿರುವ ಘಟನೆ ವರದಿಯಾಗಿದೆ.
ಹುಚ್ಚು ನಾಯಿ ಕಡಿತವೊಳಗಾದವರು ಸುಳ್ಯ ತಾಲೂಕು ಆಸ್ಪತ್ರೆಗೆ ತೆರಳಿ ಲಸಿಕೆ ಪಡಕೊಂಡಿದ್ದಾರೆ.
ಇದು ಅನೇಕ ಬೀದಿ ನಾಯಿಗಳಿಗೆ ಹಾಗೂ ಇತರ ಸಾಕು ಪ್ರಾಣಿಗಳಿಗೆ ಕಚ್ಚಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೀದಿ ನಾಯಿಗಳಿಗೆ ಇತರ ಸಾಕು ಪ್ರಾಣಿಗಳಿಗೆ ಈ ಹುಚ್ಚು ನಾಯಿ ಕಡಿದಿರುವುದರಿಂದ ಮುಂದಿನ ದಿನಗಳಲ್ಲಿ ಹುಚ್ಚುನಾಯಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು ಸುಳ್ಯ ನಗರ ಪಂಚಾಯತ್ ಈ ಪ್ರಕರಣನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.