ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.02 ರಿಂದ ಪ್ರಾರಂಭಗೊಂಡಿದ್ದು ಜ.10 ಶ್ರೀ ದೇವರ ಬ್ರಹ್ಮ ರಥೋತ್ಸವ ನಡೆಯಿತು.
ಬ್ರಹ್ಮರಥವನ್ನು ಡಾ.ಚಿದಾನಂದ ಗೌಡ ಮತ್ತು ಮನೆಯವರು ಹರಕೆ ರೂಪದಲ್ಲಿ ದೇವಳಕ್ಕೆ ಸಮರ್ಪಿಸಿದ್ದಾರೆ.
ನೂತನ ಬ್ರಹ್ಮರಥದಲ್ಲಿ ಶ್ರೀ ದೇವರ ರಥೋತ್ಸವ ಹಿನ್ನಯಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು.
ಜ.07 ರಂದು ರಾತ್ರಿ ಶ್ರೀ ಉತ್ಸವ ಬಲಿ ನಡೆಯಿತು.
ಜ.08 ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ,ನಡುಬೆಳಗು,ಬಟ್ಟಲು ಕಾಣಿಕೆ ನಡೆಯಿತು.
ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ,ವಿವೇಕಾನನಂದ ವೃತ್ತ,ಹಳೆಗೇಟು,ಹೊಸಗದ್ದೆ ಕಟ್ಟೆ,ಅಮೃತಭವನ,ರಾಮಂಮಂದಿರ,ಜಟ್ಟಿಪಳ್ಳ ಕಟ್ಟೆಯಲ್ಲಿ ಪೂಜೆಗಳು ನಡೆಯಿತು.
ಜ.09 ರಂದು ಬೆಳಿಗ್ಗೆ ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು.
ರಾತ್ರಿ ಮಿತ್ತೂರು ದೈವಗಳ ಭಂಡಾರ ಕಾನತ್ತಿಲ ದೈವಗಳ ಭಂಡಾರ ಬಳಿಲ ಬಳಿಕ ವಾಲಸಿರಿ ಉತ್ಸವ ನಡೆಯಯಿತು.
ಜ.10 ರಂದು ಬೆಳಿಗ್ಗೆ ದೊಡ್ಡದರ್ಶನ ಬಲಿ,ಬಟ್ಟಲು ಕಾಣಿಕೆ ನಡೆಯಿತು.
ರಾತ್ರಿ ಕಲ್ಕುಡ ದೈವಗಳ ಭಂಡಾರ ಬರುವುದು ನಂತರ ಬ್ರಹ್ಮರಥೋತ್ಸವ ನಡೆಯಿತು.
.