ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ( NPEP) ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದೆ. ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷಾಯಲ್ಲಿ ಪ್ರಸ್ತುತ ಪಡೆಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ರಚಿಸಿ ನಿರ್ದೇಶನ ಮಾಡಿದ್ದರು. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಪೌರ್ಣಮಿ ಕೆ, ಹಿಮಾದ್ರಿ ಸಿ.ಎಮ್., ತನ್ವಿ ಕೆ.ಟಿ., ಅಶ್ವಿತಾ ಎಂ.ಡಿ., ಗಹನಾ ಎಸ್. ಇವರನ್ನೊಳಗೊಂಡ ವಿಜೇತ ತಂಡದ ಮಾರ್ಗದರ್ಶಕರಾಗಿ ಸಮಾಜವಿಜ್ಞಾನ ಶಿಕ್ಷಕರಾದ ಪೂರ್ಣಿಮಾ ಟಿ ಹಾಗು ಗಣಿತ ಶಿಕ್ಷಕರಾದ ಲತಾ ವೆಂಕಟೇಶ ಪೈ ಭಾಗವಹಿಸಿದ್ದರು. ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆ ಗಳಿಸಿದ ಮೂರನೇ ರಾಷ್ಟ್ರಮಟ್ಟದ ಪ್ರಶಸ್ತಿ ಇದಾಗಿದೆ. ಸಂಸ್ಥೆಯ ಈ ಸಾಧನೆಯನ್ನು ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ, ಡಿ.ಎಸ್.ಇ.ಆರ್.ಟಿ. ಬೆಂಗಳೂರು ಇದರ ನಿರ್ದೇಶಕರಾದ ಗೋಪಾಲಕೃಷ್ಣ, ಈ ಕಾರ್ಯಕ್ರಮದ ರಾಜ್ಯ ವ್ಯವಸ್ಥಾಪಕರಾದ ದನಂಜಯ, ಜಿಲ್ಲಾ ಉಪನಿರ್ದೇಶಕರಾದ ರಾಜಲಕ್ಷ್ಮಿ, ಸುಳ್ಯ ತಹಶೀಲ್ದಾರರಾದ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೀತಲ್ ಇವರು ಪ್ರಶಂಸಿಸಿದ್ದಾರೆ. ಈ ಸಾಧಕರ ಸಾರ್ವಜನಿಕ ಅಭಿನಂದನಾ ಸಮಾರಂಭ ಜ.13ರಂದು ಸೋಮವಾರ ಪೂರ್ವಾಹ್ನ ನಡೆಯಲಿದೆ.