ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುರ್ ಮಾಸ ಪ್ರಯುಕ್ತ ಡಿ.16ರಿಂದ ಧನು ಪೂಜೆ ಆರಂಭಗೊಂಡಿದ್ದ ಜ.14ರಂದು ಸಮಾಪ್ತಿಯಾಯಿತು.
ಇಂದು (ಮಂಗಳವಾರ) ಮಕರ ಸಂಕ್ರಾತಿಯಂದು ಧನುರ್ ಮಾಸದ ಕೊನೆಯ ಧನುಪೂಜೆ ನಡೆಯಿತು.
ಧನುಪೂಜೆಯ ಮೊದಲು ಭಜನಾ ಸತ್ಸಂಗ ,ನ್ರತ್ಯ ಭಜನೆ ನಡೆಯಿತು.ಧನುಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ ಹಾಗೂ ಪರ ಊರಿನ ಸಾವಿರಾರು ಭಕ್ತರು ಧನು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದರು.