ಗಂಡ ಹೆಂಡತಿ ನಡುವೆ ಹೊಡೆದಾಡವಾಗಿ ಪತ್ನಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಪರಿಣಾಮ ಗಾಯವಾದ ಘಟನೆ ವರದಿಯಾಗಿದೆ.
ಪೆರಾಜೆಯ ದಾಸರಹಿತ್ತು ಎಂಬಲ್ಲಿ ಗಂಡ ಮದ್ಯಪಾನ ಮಾಡಿ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದನೆನ್ನಲಾಗಿದೆ. ಪರಿಣಾಮ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಅದು ಹೊಡೆದಾಟವಾಯಿತು. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡರು.ಹೆಂಡತಿ ಸೌಟು ಬೀಸಿದಾಗ ಅದು ಗಂಡನ ತಲೆಗೆ ಬಡಿಯಿತು. ಪರಿಣಾಮವಾಗಿ ತಲೆಯಲ್ಲಿ ಗಾಯವಾಗಿ ರಕ್ತ ಚಿಮ್ಮಿತು.
ಈ ವಿಷಯ ಅಕ್ಕ ಪಕ್ಕದ ಮನೆಯವರು ಬಂದು ನೋಡಿ ಗಂಡ ಹೆಂಡತಿಯನ್ನು ಅವರಿಬ್ಬರನ್ನೂ ಉನೈಸ್ ಪೆರಾಜೆಯವರು ತಮ್ಮ ಆಂಬುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು.
ಹೆಂಡತಿಯ ಸಿಟ್ಟು ತಲೆಗೆ ಏರಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಹೆಂಡತಿ
