ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ರಾತ್ರಿ ಧ್ವಜಾರೋಹಣಗೊಳ್ಳುವ ಮೂಲಕ ಜಾತ್ರೋತ್ಸವ ಪ್ರಾರಂಭವಾಗಿದೆ.
ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಉಪಸ್ಥಿತಿಯಲ್ಲಿ ರಾತ್ರಿ ದೇವತಾ ಪ್ರಾರ್ಥನೆ ಬಳಿಕ ಧ್ವಜಾರೋಹಣ ನಡೆಯಿತು. ನಂತರ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ,ಶ್ರೀ ಭೂತ ಬಲಿ ನಡೆಯಿತು ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರು ಸಹಿತ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಪೆರುವಾಜೆ : ಜಾತ್ರೋತ್ಸವ ಆರಂಭ
