ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪಶ್ಚಿಮ ವಲಯದ ಐಜಿ ಅಮಿತ್ ಸಿಂಗ್ ಇಂದು ಭೇಟಿ ನೀಡಿ ಕೊಲೆ ಮತ್ತು ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿದರು.
ಕೋಡಿಮಜಲು ಎಂಬಲ್ಲಿ ಕಳೆದ ರಾತ್ರಿ ಪತ್ನಿಯನ್ನು ಗುಂಡಿಕ್ಕಿ ಕೊಂದ ಗಂಡ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಕೋಡಿಮಜಲು ನಿವಾಸಿ ಕೃಷಿಕ ರಾಮಚಂದ್ರ ಗೌಡ ( 54 ) ಅವರು ಕುಡಿದು ಬಂದು ಅವರ ಮಗನಿಗೆ ಗುಂಡಿಕ್ಕಿ ಲು ಹೋದಾಗ ಅವರ ಪತ್ನಿ ವಿನೋದ (43) ಅಡ್ಡ ಬಂದಾಗ ಆ ಗುಂಡು ಅವರಿಗೆ ತಾಗಿ ಅವರು ಸ್ಥಳದಲ್ಲಿಯೇ ಸಾವನ್ನೊ್ಪಿದರು.
ಸುಮಾರು ಮೂರು ತಿಂಗಳ ಹಿಂದೆ ಅವರು ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಮಕ್ಕಳನ್ನು ಕೋವಿ ಹಿಡಿದುಕೊಂಡು ಬೆದರಿಸಿದರೆನ್ನಲಾಗಿದೆ.ಈ ಘಟನೆ ಪೋಲೀಸ್ ಠಾಣೆಯ ಮೆಟ್ಟಿಲೇರಿ ಪೋಲೀಸರ ಸೂಚನೆಯಂತೆ ಮನೆಯಲ್ಲಿದ್ದ ಕೋವಿಯನ್ನು ಸುಳ್ಯದ ಕೋವಿ ಮಳಿಗೆಯಲ್ಲಿ ಮೂರು ತಿಂಗಳ ಅವಧಿಗೆ ಡೆಪಾಸಿಟ್ ಮಾಡಿಸಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ವಿನೋದರವರ ವಿನಂತಿಯ ಮೇರೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಕೋವಿ ಬಿಡಿಸಿಕೊಳ್ಳಲು ಸಹಕರಿಸಿದ್ದರು. ಕೋವಿಯನ್ನು ಮನೆಗೆ ವಾಪಸ್ ತಂದು ಮೂರು ದಿನವಷ್ಟೆ ಕಳೆದಿತ್ತು
ಶುಕ್ರವಾರ ರಾತ್ರಿ ಕುಡಿದು ಬಂದು 10 ಗಂಟೆಯ ನಂತರ ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ ರೊಡನೆ ರಾಮಚಂದ್ರ ಗೌಡರು ಜಗಳ ಮಾಡಿದ್ದಾರೆ.ಈ ರೀತಿ ಜಗಳವಾಡುವುದನ್ನು ಹಿರಿಮಗ ಪ್ರಶಾಂತ್ ವಿರೋಧಿಸಿದ್ದಾನೆ. ಆಗ ರಾತ್ರಿ 10.30. ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡು ಹೊಡೆಯಲು ಮುಂದೆ ಬಂದಿದ್ದಾರೆ.
ಇದಕ್ಕೆ ಪತ್ನಿ ವಿನೋದರವರು ಅಡ್ಡ ಬಂದು ಗಂಡನನ್ನು ತಡೆಯಲು ಪ್ರಯತ್ನಿಸಿದ್ದಾರೆ.ಆ ವೇಳೆ ರಾಮಚಂದ್ರ ಗೌಡರು ಕೋವಿಯ ಟ್ರಿಗರ್ ಎಳೆದಿದ್ದಾರೆ. ಅದು ಪತ್ನಿ ವಿನೋದರಿಗೆ ತಾಗಿ ಕುಸಿದು ಪ್ರಾಣ ಬಿಟ್ಟಿದ್ದಾರೆ. ಕೂಡಲೇ ರಾಮಚಂದ್ರ ಗೌಡರು ವಿಷವನ್ನು ಕುಡಿದು ಪ್ರಾಣ ಬಿಟ್ಟರು ಎನ್ನಲಾಗಿದೆ.
ಕೊಲೆ ಮತ್ತು ಆತ್ಮ ಹತ್ಯೆ ಪ್ರಕರಣದ ಸ್ಥಳಕ್ಕೆ ಪಶ್ವಿಮ ವಲಯ ಐಜಿಪಿ ಭೇಟಿ
