ಹೆಂಡತಿಯನ್ನು ಗುಂಡಿಕ್ಕಿ ಕೊಲೆ ಮಾಡಿ ತಾನು ಆತ್ಮ ಹತ್ಯೆ ಮಾಡಿಕೊಂಡ ಕುಡುಕ ಗಂಡ

ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಕಳೆದ ರಾತ್ರಿ
ಪತ್ನಿಯನ್ನು ಗುಂಡಿಕ್ಕಿ ಕೊಂದ ಗಂಡ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ ಕೃಷಿಕ ರಾಮಚಂದ್ರ ಗೌಡ ( 54 ) ಅವರು ಕುಡಿದು ಬಂದು ಜಗಳವಾಡತ್ತಿದ್ದರು. ಬೆಳೆಗಳಿಗೆ ಕಾಡುಪ್ರಾಣಿಗಳ ಉಪಟಳವಿರುವುದರಿಂದ ಲೈಸೆನ್ಸ್ ಇರುವ ಕೋವಿ ಹೊಂದಿದ್ದರು. ಅವರ ಪತ್ನಿ ವಿನೋದ (43) ಹಾಗೂ ಮೂವರು ಪುತ್ರರು. ಪ್ರಶಾಂತ, ನಿಶಾಂತ ಮತ್ತು ರಂಜಿತ್.
ಸುಮಾರು ಮೂರು ತಿಂಗಳ ಹಿಂದೆ ಅವರು ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಮಕ್ಕಳನ್ನು ಕೋವಿ ಹಿಡಿದುಕೊಂಡು ಬೆದರಿಸಿದರೆನ್ನಲಾಗಿದೆ.ಈ ಘಟನೆ ಪೋಲೀಸ್ ಠಾಣೆಯ ಮೆಟ್ಟಿಲೇರಿ ಪೋಲೀಸರ ಸೂಚನೆಯಂತೆ ಮನೆಯಲ್ಲಿದ್ದ ಕೋವಿಯನ್ನು ಸುಳ್ಯದ ಕೋವಿ ಮಳಿಗೆಯಲ್ಲಿ ಮೂರು ತಿಂಗಳ ಅವಧಿಗೆ ಡೆಪಾಸಿಟ್ ಮಾಡಿಸಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ವಿನೋದರವರ ವಿನಂತಿಯ ಮೇರೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಕೋವಿ ಬಿಡಿಸಿಕೊಳ್ಳಲು ಸಹಕರಿಸಿದ್ದರು. ಕೋವಿಯನ್ನು ಮನೆಗೆ ವಾಪಸ್ ತಂದು ಮೂರು ದಿನವಷ್ಟೆ ಕಳೆದಿತ್ತು
ಶುಕ್ರವಾರ ರಾತ್ರಿ ಕುಡಿದು ಬಂದು 10 ಗಂಟೆಯ ನಂತರ ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ ರೊಡನೆ ರಾಮಚಂದ್ರ ಗೌಡರು ಜಗಳ ಮಾಡಿದ್ದಾರೆ.ಈ ರೀತಿ ಜಗಳವಾಡುವುದನ್ನು ಹಿರಿಮಗ ಪ್ರಶಾಂತ್ ವಿರೋಧಿಸಿದ್ದಾನೆ. ಆಗ ರಾತ್ರಿ 10.30. ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡು ಹೊಡೆಯಲು ಮುಂದೆ ಬಂದಿದ್ದಾರೆ.
ಇದಕ್ಕೆ ಪತ್ನಿ ವಿನೋದರವರು ಅಡ್ಡ ಬಂದು ಗಂಡನನ್ನು ತಡೆಯಲು ಪ್ರಯತ್ನಿಸಿದ್ದಾರೆ‌.ಆ ವೇಳೆ ರಾಮಚಂದ್ರ ಗೌಡರು ಕೋವಿಯ ಟ್ರಿಗರ್ ಎಳೆದಿದ್ದಾರೆ. ಅದು ಪತ್ನಿ ವಿನೋದರಿಗೆ ತಾಗಿ ಕುಸಿದು ಪ್ರಾಣ ಬಿಟ್ಟಿದ್ದಾರೆ. ಕೂಡಲೇ ರಾಮಚಂದ್ರ ಗೌಡರು ವಿಷವನ್ನು ಕುಡಿದು ಪ್ರಾಣ ಬಿಟ್ಟರು ಎನ್ನಲಾಗಿದೆ.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top