ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ಕ್ಷೇತ್ರ ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಸ್ಥಳ ಎಂದೇ ಜನಜನಿತ ಈ ಕ್ಷೇತ್ರದಲ್ಲಿ ಜ.19 ರ ದಿವಾ ಘಂಟೆ 9-10ರಿಂದ 9-56ರರೊಳಗಿನ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವ ನಡೆಯಲಿದೆ.
ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ಆಶ್ವತ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜ. 18 ರ ಸಂಜೆ ತಂತ್ರಿಗಳ ಆಗಮನ ವಾಗಲಿದೆ. ಅಂದು ರಾತ್ರಿ ಗಂಟೆ 7-00ರಿಂದ ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರಣ, ಪ್ರಾಸಾದ ಬಿಂಬ ಪರಿಗ್ರಹ, ಪಶುಧಾನ ಪುಣ್ಯಾಹ, ಪ್ರಾಸಾದ ಶುದ್ದಿ, ಜಲಾಧಿವಾಸ, ಸ್ಥಳ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಳಿಕ ನಡೆದು ಬಳಿಕ ಅನ್ನಸಂತರ್ಪಣೆ.
ಜ. 19 ರ ಬೆಳಿಗ್ಗೆ ಶ್ರೀ ಗಣಪತಿ ಹೋಮ, ಜಲೋದ್ಧಾರ, ಬಿಂಬ ಶುದ್ದಿ, ಅನುಜ್ಞಾಕಲಶ, ಅನುಜ್ಞಾ ಪೂಜೆ, ಪ್ರಾರ್ಥನೆ, ಜೀವೋದ್ವಾಸನೆ, ಕಲಶ ಪೂಜೆ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ ಪಾಯಸ ಹೋಮ, ಶಂಖಚೂಡ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಕ್ಷೀರಾಭಿಷೇಕ, ಬೊಂಡಾಭಿಷೇಕ, ಕಲಶಾಭಿಷೇಕ, ಆಶ್ಲೇಷ ಬಲಿ,ಬೊಂಡಾಭಿಷೇಕ, ಕಲಶಾಭಿಷೇಕ, ಆಶ್ಲೇಷ ಬಲಿ, ನೈವೇದ್ಯ ಸಮರ್ಪಣೆ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ ನಡೆದು ಪ್ರಸಾದ ವಿತರಣೆ ಬಳಿಕ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
21/06/2024 21/08/2024 ರಂದು ಕೆಲಗಳನ್ನು ಆರಂಬಿಸಲಾಗಿದ್ದು ಕೇವಲ 6 ತಿಂಗಳಲ್ಲೇ ತೋಟದೊಂದಿಗಿದ್ದ ಸ್ಥಳ ಬಯಲು ಆಲಯವಾಗಿ ಮಾರ್ಪಟ್ಟಿರುವು ಇಲ್ಲಿನ ವಿಶೇಷತೆ. ಈಗಾಗಲೇ ಸುಮಾರು 30 ಲಕ್ಷ ವೆಚ್ಚ ಮಾಡಿ ಬಯಲು ಆಲಯ ರಚನೆಗೊಂಡಿದೆ. ಇಲ್ಲಿಗೆ ದೀಪಾವಳಿ ಯ ಸಂದರ್ಭ ವಳಲಂಬೆ ದೇವಸ್ಥಾನದ ಅರ್ಚಕರು ಪೂಜೆ ನೆರವೇರಿಸುವ ಕ್ರಮವಿದೆ. ಬಳಿಕ ಕಂದ್ರಪ್ಪಾಡಿಯ ಜಾತ್ರಾ ಸಮಯ ಇಲ್ಲಿಗೆ ಪೂಜಾರಿಗಳು ಬಂದು ಕಂಚು ಕಲ್ಲಿಗೆ ಕಾಯಿ ಒಡೆಯುವ ಕಾರ್ಯಕ್ರಮ ನಡೆಯುತ್ತಿದೆ.
ನಾಳೆ ಮಣಿಯಾನ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವ
