ಇತಿಹಾಸ ಪ್ರಸಿದ್ದ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕದ ವಲಿಯುಲ್ಲಾಹಿ ದರ್ಗಾಶರೀಫ್ ಪೇರಡ್ಕದಲ್ಲಿ ಜ.31 ರಿಂದ ಫೆ.2 ರ ವರೆಗೆ ಉರೂಸ್ ಸಮಾರಂಭ ಹಾಗೂ ಫೆ.2 ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಟಿ.ಎಂ. ಶಹೀದ್ ಹಾಗೂ MRDA ಅಧ್ಯಕ್ಷ ಜಿ.ಕೆ ಹಮೀದ್ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜ.31 ರಂದು ಶುಕ್ರವಾರ ಜುಮ್ಮಾ ನಮಾಜಿನ ಬಳಿಕ ಧ್ವಜಾರೋಹಣ, ಮುಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಡೆಯುವುದು. ರಾತ್ರಿ ಕಾರ್ಯಕ್ರಮದ ಉದ್ಘಾಟನೆ ನಡೆಯುವುದು. ಹಮೀದಲೀ ಶಿಹಾಬ್ ತಂಬಳ್ ಪಾಣಕ್ಕಾಡ್ ಉದ್ಘಾಟನೆ ನೆರವೇರಿಸಲಿದ್ದು, ಅಬ್ದುಲ್ ರಜಾಕ್ ಅಬ್ರಾರಿ ಪಟ್ಟನಂತಿಟ್ಟ ಧಾರ್ಮಿಕ ಪ್ರಭಾಷಣಗೈಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎಂ.ಶಹೀದ್ ವಹಿಸುವರು.ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.1 ರಂದು ರಾತ್ರಿ ರೌಲತುಲ್ ಉಲೂಂ ದಫ್ ಕಳಿ ಸಂಘಂ ಪೂವಲ್ ಕಾಸರಗೋಡು ಇವರಿಂದ ದಫ್ ಸ್ಪರ್ಧೆ, ಬುರ್ದಾ ಮಜ್ಜಿಸ್, ರಸೂಲ್ ಮದ್ ಹ್ ಗಾನಂ” ನಡೆಯುವುದು.
ಮೂರನೇ ದಿನ ರಾತ್ರಿ ಸರ್ವಧರ್ಮ ಸಮ್ಮೇಳನ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ ಟಿ. .ಎಂ.ಶಹೀದ್ ಅಧ್ಯಕ್ಷತೆ ವಹಿಸಲಿದ್ದಾರೆ,ಬಹು! ಅಹ್ಮದ್ ಈಮ್ ಪೈಝಿ ಅಲ್ ಮ ಅ ಬರಿ ದುವಾ ನೆರವೇರಿಸಲಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಉದ್ಘಾಟಿಸಲಿದ್ದಾರೆ.
ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಬಳಿಕ ಉರೂಸ್ ಸಮಾರೋಪ ಸಮಾರಂಭ ನಡೆಯುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಪಿ.ಬಿ.ಹನೀಫ್ ಉಪಸ್ಥಿತರಿದ್ದರು.