ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದು ಬೆಳ್ಳಿ ಹಬ್ಬ ಸಂಭ್ರಮದಲ್ಲಿದ್ದು ಸಂಸ್ಥೆಯ ಬೆಳ್ಳಿಹಬ್ಬ ಆಚರಣೆಯ ಸವಿನೆನಪಿಗಾಗಿ ಸಂಸ್ಥೆಯ
ಸಹಸಂಸ್ಥೆ ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗೆ ಕೊಡುಗೆ ನೀಡಿದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಜ. 20 ಸೋಮವಾರಪೂರ್ವಾಹ್ನ ಗಂಟೆ 10.30ಕ್ಕೆ ಎಂ.ಜಿ.ಎಂ. ವಿದ್ಯಾಸಂಸ್ಥೆಗಳ ವಠಾರ, ಉಬರಡ್ಕದ ಕೊಡಿಯಾಲಬೈಲಿನಲ್ಲಿ ನಡೆಯಲಿದೆ ಎಂದು ಶ್ರೀ ವೆಂಕಟ್ರಮಣ ಕ್ರೆಡಿಟ್ ಅಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ್ ತಿಳಿಸಿದ್ದಾರೆ.
ಅವರು ಸೊಸೈಟಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನೂತನೂತನ ಕೊಠಡಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.ದೀಪ ಪ್ರಜ್ವಲನೆನ್ನು ಶ್ರೀ ಬಿ. ರಮಾನಾಥ ರೈ, ಸನ್ಮಾನ್ಯ ಮಾಜಿ ಸಚಿವರು. ಕರ್ನಾಟಕ ಸರಕಾರ ಮಾಡಲಿದ್ದಾರೆ.ಪಿ.ಸಿ. ಜಯರಾಮ ಅಧ್ಯಕ್ಷರು, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಸುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಸದಾನಂದ ಮಾವಜಿ, ಅಧ್ಯಕ್ಷರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,
ಜುಬಿನ್ ಮೊಹಾಪಾತ್ರ ಭಾ.ಆ.ಸೇ.ಆಡಳಿತಾಧಿಕಾರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯನಿತ್ಯಾನಂದ ಮುಂಡೋಡಿ, ಸ್ಥಾಪಕಾಧ್ಯಕ್ಷರು, ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ , ಎ.ವಿ.ತೀರ್ಥರಾಮ, ಅಧ್ಯಕ್ಷರು, ಗೌಡ ಸಮುದಾಯ ಭವನ ನಿರ್ಮಾಣ ಸಮಿತಿ,ಪೂರ್ಣಿಮ ಸೂಂತೋಡು, ಅಧ್ಯಕ್ಷರು, ಗ್ರಾಮ ಪಂಚಾಯತ್ ಉಬರಡ್ಕ ಮಿತ್ತೂರು,ಚಿತ್ರ ಕುಮಾರಿ ಪಾಲಡ್ಕ, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಉಬರಡ್ಕ ಮಿತ್ತೂರು,ಶೀತಲ್ ಯು.ಕೆ., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುಳ್ಯ,ಪಿ.ಎಸ್. ಗಂಗಾಧರ, ಅಧ್ಯಕ್ಷರು, ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ ದೊಡ್ಡಣ್ಣ ಬರೆಮೇಲು, ಶಾಲಾ ಸಂಚಾಲಕರು MGM ವಿದ್ಯಾಸಂಸ್ಥೆಗಳು ಮಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಎಮ್.ಜಿ.ಎಮ್ ಶಾಲೆಗೆ ಕೊಡುಗೆ ನೀಡಿದ 3 ಕೊಠಡಿಯ ಉದ್ಘಾಟನೆ ಶ್ರೀ ವೆಂಕಟರಮಣ ದೇವರ ಹೆಸರಿನಲ್ಲಿ ಆರಂಭವಾಗಿದೆ. ಪ್ರಾರಂಭದಲ್ಲಿ 435 ಸದಸ್ಯರಿಂದ ಪ್ರಾರಂಭವಾದ ಈ ಸಂಘದಲ್ಲಿ ಪ್ರಸ್ತುತ 20,987 ವಿವಿಧ ವರ್ಗದ ಸದಸ್ಯರಿದ್ದು, ಇವರಿಂದ ರೂ 4.97 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಗೃಹಸಾಲ, ವಾಣಿಜ್ಯ ಕಟ್ಟಡ ಸಾಲ, ಜಮೀನು ಖರೀದಿ ಸಾಲ, ಜಮೀನು ಅಡವು ಸಾಲ, ವೇತನ ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲಗಳನ್ನು ನೀಡುತ್ತಿದ್ದು, ಹಾಗೇಯೇ ಇ-ಸ್ಟಾಂಪಿಂಗ್ ವಿತರಣೆ. RTGS/NEFT ಸೌಲಭ್ಯವನ್ನು ನೀಡುತ್ತಿದ್ದೇವೆ. ಸುಳ್ಯ ತಾಲೂಕು ಕಾರ್ಯವ್ಯಾಪ್ತಿಗೆ ನೋಂದಾಯಿಸಲ್ಪಟ್ಟ ಸಂಸ್ಥೆಯ ಇಂದು ರಾಜ್ಯದ ಉದ್ದಗಲಕ್ಕೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಆರಂಭದ ವರ್ಷದಿಂದಲೇ ಲಾಭದಲ್ಲಿ ಮುನ್ನಡೆದ ಸಂಸ್ಥೆ ನಮ್ಮದಾಗಿದೆ. ಇದೀಗ ರಾಜ್ಯದ ವಿವಿಧ ಭಾಗಗಳಲ್ಲಿ 23 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ.
ವರದಿ ವರ್ಷದಲ್ಲಿ ನಮ್ಮ ಸಹಕಾರಿ ಸಂಘವು ರೂ 222 ಕೋಟಿ ಠೇವಣಿ ಹೊಂದಿದ್ದು, ರೂ 215 ಕೋಟಿ ಸಾಲಗಳನ್ನು ಸದಸ್ಯರುಗಳಿಗೆ ವಿತರಿಸಿರುತ್ತದೆ. ದುಡಿಯುವ ಬಂಡವಾಳ ರೂ 242 ಕೋಟಿ ಇದ್ದು ಒಟ್ಟು ರೂ. 1,200 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸುತ್ತಿದ್ದೇವೆ. ಸಂಘಕ್ಕೆ ಸುಳ್ಯದ ಮೊಗರ್ಪಣಿಯಲ್ಲಿ ಮುಖ್ಯ ರಸ್ತೆ ಪಕ್ಕ 33.50 ಸೆಂಟ್ಸ್ ಸ್ವಂತ ನಿವೇಶನ ಇದ್ದು, ಇದರಲ್ಲಿ ಸಂಘಕ್ಕೆ ಸುಸಜ್ಜಿತವಾದ ವಾಣಿಜ್ಯ ಮಳಿಗೆಗಳನ್ನೊಳಗೊಂಡ ಕಟ್ಟಡವನ್ನು ನಿರ್ಮಿಸಿರುತ್ತೇವೆ. ನೆಲ ಅಂತಸ್ತಿನಲ್ಲಿ ಸುಟ್ಟ ಶಾಖೆ ಕಾರ್ಯ ನಿರ್ವಹಿಸುತ್ತಿದ್ದು, 1ನೇ ಮಹಡಿಯಲ್ಲಿ ವಿಶಾಲವಾದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಆಡಳಿತ ಕಛೇರಿ. ಸಭಾಭವನ, ಅತಿಥಿಗೃಹ ನಿರ್ಮಿಸಿರುತ್ತೇವೆ. ಸಂಘದ ಹೆಚ್ಚಿನ ಎಲ್ಲಾ ಶಾಖೆಗಳಲ್ಲಿ ಇ ಸ್ಟಾಂಪಿಂಗ್ ವಿತರಣೆ ಮಾಡುತ್ತಿದ್ದು, ಸುಳ್ಯ ಶಾಖೆಯಲ್ಲಿ ಸೇಫ್ ಡಿಪಾಸಿಟ್ ಲಾಕರ್ ವ್ಯವಸ್ಥೆ ಸೌಲಭ್ಯ ದೊರೆಯುತ್ತಿದೆ.
2020-2025 ಇದೀಗ ಬೆಳ್ಳಿಹಬ್ಬದ ಸಂಧರ್ಭದಲ್ಲಿ ನನ್ನನ್ನು ಅಧ್ಯಕ್ಷನಾಗಿ ಹಾಗೂ ಮೋಹನ್‌ರಾಂ ಸುಳ್ಳಿಯವರನ್ನು ಉಪಾಧ್ಯಕ್ಷರಾಗಿ ಆಡಳಿತ ಮಂಡಳಿ ಆಯ್ಕೆ ಮಾಡಿ ಒಳ್ಳೆಯ ಅವಕಾಶ ಮಾಡಿ ಕೊಟ್ಟಿರುತ್ತಾರೆ. ಈ ಅವಧಿಯಲ್ಲಿ ನಮ್ಮ ಇಡೀ ತಂಡ 12,736 ಇದ್ದ ಸದಸ್ಯರ ಸಂಖ್ಯೆಯನ್ನು 20,000 ಕ್ಕೆ ಏರಿಸಿದೆ. 3 ಕೋಟಿ ಇದ್ದ ಪಾಲು ಬಂಡವಾಳಿ 4.97 ಕೋಟಿ ಏರಿಕೆ. 80 ಕೋಟಿ ಇದ್ದ ಠೇವಣಿ 222 ಕೋಟಿಗೆ ಏರಿದೆ. 70 ಕೋಟಿ ಇದ್ದ ಸಾಲ 215 ಕೋಟಿಗೆ ಏರಿದೆ. ವಾರ್ಷಿಕ 400 ಕೋಟಿ ವ್ಯವಹಾರ ನಡೆಸುತ್ತಿದ್ದ ಸಂಸ್ಥೆ 1,200 ಕೋಟಿ ವ್ಯವಹಾರವನ್ನು ನಡೆಸುತ್ತಿದೆ.ಸಂಸ್ಥೆಯಲ್ಲಿ 63 బుంది ಖಾಯಂ, ಸಿಬ್ಬಂದಿಗಳು, 28 ముంది ತಾತ್ಕಾಲಿಕ ಸಿಬ್ಬಂದಿಗಳು , 60 ಕ್ಕೂ ಮಿಕ್ಕಿ ನಿತ್ಯನಿಧಿ ಸಂಗ್ರಾಹಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಂಕ್‌ನ ಮಾಜಿ ಅಧ್ಯಕ್ಷರ, ನಿರ್ದೇಶಕರ ಯೋಚನೆಗಳು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿಗಳ ನಗುಮೊಗದ ಸೇವೆ, ಸದಸ್ಯರ ಸಹಕಾರ.. ಮಾಧ್ಯಮದವರ ಪ್ರಚಾರ. ಇಲಾಖಾಧಿಕಾರಿಗಳ ಮಾರ್ಗದರ್ಶನದಿಂದ ಇದನ್ನು ಸಾಧಿಸಲು ಸಾಧ್ಯವಾಗಿದೆ ಎಂದು 1997 ರಲ್ಲಿ ಪ್ರಾರಂಭವಾದ ಸಹಕಾರ ಸಂಘಕ್ಕೆ 25 ವರ್ಷ ತುಂಬತಕ್ಕೆ ಸಂದರ್ಭದಲ್ಲಿ ಶಾಶ್ವತ ಕೊಡುಗೆಗಳನ್ನು ನೀಡಬೇಕೆಂಬ ಉದ್ದೇಶದಿಂದ ಬೈಲಾದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುವುದು ಎಂಬ ಉದ್ದೇಶದಿಂದ ಗೌಡರ ಯುವ ಸೇವಾ ಸಂಘ 2000 ನೇ ವರ್ಷದಲ್ಲಿ ಆರಂಭಿಸಿದ ಸುಳ್ಯದ ಕೊಡಿಯಾಲಬೈಲ್‌ನಲ್ಲಿರುವ ಮಹಾತ್ಮ ಗಾಂಧಿ ಮಲ್ನಾಡ್ ಪ್ರೌಢಶಾಲೆಗೆ 3 ಕೊಠಡಿಗಳನ್ನು ಪೂರೈಸುವುದು ಮತ್ತು ಬ್ಯಾಂಕ್‌ನ ಕಟ್ಟಡವನ್ನು ಮೇಲಂತಸ್ತಿಗೆ ಏರಿಸುವುದು ಎಂದು ಆಡಳಿತ ಮಂಡಳಿ ನಿರ್ಧರಿಸಿ ಶಾಲಾ ಕೊಠಡಿಯನ್ನು ಪೂರೈಸಿದೆ. ಕೇಂದ್ರ ಕಛೇರಿಯಲ್ಲಿ ಮೇಲಂತಸ್ತಿನ ಕಾಮಾಗಾರಿಗಳು ಭರದಿಂದ ಸಾಗುತ್ತಿದೆ. ಮಹಾತ್ಮ ಗಾಂಧಿ ಮಲ್ನಾಡ್ ಪ್ರೌಢಶಾಲೆ 2000 ನೇ ವರ್ಷದಲ್ಲಿ ಕನ್ನಡ ಮಾಧ್ಯಮದಲ್ಲಿ ಆರಂಭಿಸಲಾದ ಸಂಸ್ಥೆ ಸುಮಾರು 15 SSLC ಬ್ಯಾಚ್ಗಳು ಶೇಕಡಾ 100 ಫಲಿತಾಂಶವನ್ನು ಪಡೆದಿದೆ. ಇದೀಗ ಅಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಿ LKG ಯಿಂದ 9 ನೇ ತರಗತಿಯವರೆಗೆ ಮಕ್ಕಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. 210 ವಿದ್ಯಾರ್ಥಿಗಳು దిద్యాభ్యాన ಪಡೆಯುತ್ತಿದ್ದಾರೆ. ಆ ಸಲುವಾಗಿ ಸುಮಾರು 30 ಲಕ್ಷ ವೆಚ್ಚದ 3 ಕೊಠಡಿಗಳನ್ನು ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬದ ನೆನಪಿಗೆ ಸಂಘದ ಆಡಳಿತ ಮಂಡಳಿ ನೀಡುತ್ತಿದ್ದೇವೆ. ಗೌಡರ ಯುವ ಸೇವಾ ಸಂಘಕ್ಕೆ 6.15 ಎಕ್ರೆ ಸ್ವಂತ ಜಮೀನು ಇದೆ. ಅಲ್ಲಿ ಗೌಡ ಸಮುದಾಯ ಭವನ ನಿರ್ಮಿಸಲಾಗಿದ್ದು, ಅದರ ನಿರ್ವಹಣೆಗೂ ಬ್ಯಾಂಕ್ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಟಿ.ವಿಶ್ವನಾಥ
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ಮೋಹನ್ ರಾಮ್ ಸುಳ್ಳಿ ಉಪಾಧ್ಯಕ್ಷರು,ನಿರ್ದೇಶಕರಾದ
ಜಾಕೆ ಸದಾನಂದ,ನಿತ್ಯಾನಂದ ಮುಂಡೋಡಿ
ಎ.ವಿ.ತೀರ್ಥರಾಮ ಚಂದ್ರಾ ಕೋಲ್ಟಾರ್,ಕೆ.ಸಿ.ನಾರಾಯಣ ಗೌಡ ಕೆ.ಸಿ.ಸದಾನಂದ,ಪಿ.ಎಸ್.ಗಂಗಾಧರ
ದಿನೇಶ್ ಮಡಪ್ಪಾಡಿ ದಾಮೋದರ ನಾರ್ಕೋಡು, ಜಯಲಲಿತ ಕೆ.ಎಸ್.ನಳಿನಿ ಸೂರಯ್ಯ, ಲತಾ ಎಸ್.ಮಾವಜಿ,ಹೇಮಚಂದ್ರ ಐ.ಕೆ. ಶೈಲೇಶ್ ಅಂಬೆಕಲ್ಲ,ನವೀನ್‌ಕುಮಾರ್ ಉಪಸ್ಥಿತರಿದ್ದರು.
ಜ.20ಕ್ಕೆ ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗೆ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಕೊಡುಗೆ ನೀಡಿದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ
