ಉತ್ತರಪ್ರದೇಶದ ಬಸ್ತಿಯ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.
ತನ್ನ ಹಿಂದು ಪ್ರಿಯತಮೆಯನ್ನು ಮದುವೆಯಾಗಲು ವರನಾದ ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಸೋನಿ ಎಂದು ಬದಲಿಸಿಕೊಂಡು, 10 ವರ್ಷಗಳ ಪ್ರಿಯತಮೆ ಅನು ಸೋನಿಯನ್ನು ಹಿಂದೂ ಸಂಪ್ರದಾಯಗಳಂತೆ ವಿವಾಹವಾಗಿದ್ದಾನೆ. ಇದಕ್ಕೂ 3 ದಿನಗಳ ಮುನ್ನ ಮಹಿಳೆಯು ಸದ್ದಾಂ ಮತ್ತು ಆತನ ಕುಟುಂಬದ ವಿರುದ್ಧ ಮದುವೆ ನೆಪದಲ್ಲಿ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಳು. ಆದಾಗ್ಯೂ ಈ ಜೋಡಿಯು ಪರಸ್ಪರ ಒಪ್ಪಿಗೆಯೊಂದಿಗೆ ಭಾನುವಾರ ವಿವಾಹವಾಗಿದ್ದು, ಮಹಿಳೆ ಕೇಸ್ ಹಿಂಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ಲಿಂ ವ್ಯಕ್ತಿ ಹಿಂದು ಧರ್ಮಕ್ಕೆ ಮತಾಂತರ
