ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕೊಡಂಕೇರಿಯಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ ಫೆಬ್ರವರಿ 8, 9, 10 ಶ್ರದ್ದಾ ಭಕ್ತಿಯಿಂದ ನಡೆಯಲಿದೆ.
ಫೆಬ್ರವರಿ 8 ಶನಿವಾರದಂದು ಅಪರಾಹ್ನ 3 ಗಂಟೆಗೆ ಗುಳಿಗನ ಕೋಲ ಮತ್ತು ಪ್ರಸಾದ ವಿತರಣೆ, ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 10 ರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಅಗಲು ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಫೆಬ್ರವರಿ 9 ಭಾನುವಾರ ರಾತ್ರಿ 8 ರಿಂದ ಫೆಬ್ರವರಿ 10 ಸೋಮವಾರದ ತನಕ ಸ್ವಾಮಿ ಸ್ವಾಮಿ ಕೊರಗಜ್ಜ ದೈವದ ಹರಕೆ ಕೋಲ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿ ಕೊರಗಜ್ಜನ ಕರಿಗಂಧ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಂತೋಡು : ಫೆ.8ರಿಂದ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ
