ಮಹಿಳೆಯಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ,ಮಹಿಳೆ ವಿರುದ್ದ ಪೋಕ್ಸೋ ಪ್ರಕರಣ ದಾಖಲು!

ಅಪ್ರಾಪ್ತ ವಯಸ್ಸಿನ ಬಾಲಕನ್ನು ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿಯಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ವಿಶೇಷ ಘಟನೆ ವರದಿಯಾಗಿದೆ.
ಬಂಧಿತ ಮಹಿಳೆಯನ್ನು 28ರ ಹರೆಯದ ವಿನೋಧಿನಿ ಎಂದು ತಿಳಿದು ಬಂದಿದೆ.
ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ. ನಾಪತ್ತೆಯಾಗಿದ್ದ 10ನೇ ತರಗತಿ ಹುಡುಗನ್ನು ಆತನ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಮಹಿಳೆ ಜತೆ ಪತ್ತೆ ಹಚ್ಚಿದ ಪೊಲೀಸರು 17 ವರ್ಷದ ಹುಡುಗನ ರಕ್ಷಣೆ ಮಾಡಿದ್ದಾರೆ. ವಿನೋಧಿನಿ ಹಾಗೂ10ನೇ ತರಗತಿ ಹುಡುಗ ಕುಟುಂಬ ಒಂದೇ ಗ್ರಾಮದಲ್ಲಿ ವಾಸಿಸುತ್ತಿತ್ತು. ಗಂಡ ಹಾಗೂ ಇಬ್ಬರು ಮಕ್ಕಳು ಜತೆಗಿದ್ದ ವಿನೋಧಿನಿ 17ರ ಹುಡುಗನ ಪ್ರೀತಿಸಲು ಶುರು ಮಾಡಿದಳು. ಫೋನ್ ನಂಬರ್ ಪಡೆದು ಪ್ರತಿ ದಿನ ಆತನಿಗೆ ಕರೆ ಮಾಡುತ್ತಿದ್ದಳು. ಗಂಡ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಕರೆಯಿಸಿ ಹುಡುಗನ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಹುಡುಗನ ಕುಟುಂಬಸ್ಥರಿಗೆ ಈ ವಿಷಯ ತಿಳಿದಿರಲಿಲ್ಲ.
ಮೊನ್ನೆ ಶಾಲೆಗೆ ತೆರಳಿದ ಬಾಲಕ ಮನೆಗೆ ಮರಳಲಿಲ್ಲ. ರಾತ್ರಿಯಾದರೂ ಮನೆಗೆ ಮರಳಲೇ ಇಲ್ಲ. ಗಾಬರಿಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ಪೋಷಕರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಬಾಲಕನ ಗೆಳೆಯರು ಸೇರಿದಂತೆ ಹಲವರಿಂದ ಮಾಹಿತಿ ಪಡೆದರು. ಈ ವೇಳೆ ವಿನೋಧಿನಿ ಎಂಬ ಮಹಿಳೆಯ ವಿಷಯ ತಿಳಿಯಿತು. ಈ ಮಾಹಿತಿ ಆಧರಿಸಿದ ಪೊಲೀಸರು ಮರು ದಿನ ಬೆಳಗ್ಗೆವಿನೋಧಿನಿ ಮನೆಗೆ ತೆರಳಿದಾಗ ಆಕೆಯೂ ನಾಪತ್ತೆಯಾಗಿರುವುದು ಕಂಡು ಬಂತು. ಅಲ್ಲಿಗೆ ಪೊಲೀಸರ ಅನುಮಾನ ನಿಜವಾಯಿತು. ಟವರ್ ಲೊಕೇಶನ್ ಸೇರಿದಂತೆ ಎಲ್ಲ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದರು. ಇತ್ತ ವಿನೋಧಿನಿ ತನ್ನ ಸಂಬಂಧಿಕರ ಮನೆಯನ್ನು ಬಾಡಿಗೆ ರೂಪದಲ್ಲಿ ಪಡೆದಿದ್ದಳು. ಈ ಬಾಡಿಗೆ ಮನೆಗೆ ಬಾಲಕನ ಕರೆದುಕೊಂಡು ಹೋಗಿದ್ದಾಳೆ. ಪ್ರೀತಿ ಹೆಸರಲ್ಲಿ ಬಾಲಕನ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ. ಇದೀಗ ಪೊಲೀಸರು ವಿನೋಧಿನಿಯನ್ನು ಬಂಧಿಸಿ ಬಾಲಕನ ರಕ್ಷಣೆ ಮಾಡಿದ್ದಾರೆ. ವಿನೋಧಿನಿ ಮೇಲೆ ಪೋಕ್ಸ ಪ್ರಕರಣ ದಾಖಲಾಗಿದೆ. ಇತ್ತ ಬಾಲಕನ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ತಮಿಳುನಾಡಿನಲ್ಲಿ 2024ರಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಸತ್ಯಪ್ರಿಯಾ ಎಂಬ ಮಹಿಳೆ ತನ್ನ ಪುತ್ರನ ತರಗತಿಯ ಸಹಪಾಠಿಯನ್ನೇ ಲೈಂಗಿಕವಾಗಿ ಬಳಸಿಕೊಂಡು ಅರೆಸ್ಟ್ ಆಗಿರುವುದನ್ನು ನೆನಪಿಸಿಕೊಳ್ಳಬಹುದು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top