.ಅರಂತೋಡಿನ ಆಟೋ ಚಾಲಕ, ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಕಂದಸ್ವಾಮಿ ಎಂಬವರು ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಕಂದಸ್ವಾಮಿಯವರು ನೇಣುಬಿಗಿದುಕೊಂಡ ವಿಷಯ ಗೊತ್ತಾಗಿ ಮನೆಯವರು ಅವರನ್ನು ಹಗ್ಗದಿಂದ ಇಳಿಸಿ, ಸಮೃದ್ಧಿ ಮಾರ್ಟಿನ ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ತಂದರೂ, ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ.
ಕಂದಸ್ವಾಮಿಯವರಿಗೆ 55 ವರ್ಷ ಪ್ರಾಯವಾಗಿತ್ತು. ಪತ್ನಿ ಜ್ಞಾನ ಸುಂದರಿ, ಪುತ್ರರಾದ ರಮೇಶ, ಮನು ಹಾಗೂ ಮಹೇಶರನ್ನು ಅವರು ಅಗಲಿದ್ದಾರೆ