ಸುಳ್ಯ ತಾಲೂಕಿನ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಫೆಬ್ರವರಿ 21ಕ್ಕೆ ಬಿಡುಗಡೆಯಗಲಿದೆ.ಹಲವಾರು ಕಡೆ ಚಿತ್ರೀಕರಣಗೊಂಡು ಸುಳ್ಯದ (ಮೆಡಿಕಲ್ ಕಾಲೇಜು,ಶ್ರೀ ರೇಣುಕಾಪ್ರಸಾದ್ ರವರ ತೋಟದ ಮನೆ, ಗಾಂಧಿನಗರದ ಮೆಹಫಿಲ್ ವಿಲ್ಲಾ , ವೆಂಕಟರಮಣ ಸೊಸೈಟಿ, ಹರಿಹರ,ತಳೂರು )ಸುತ್ತಮತ್ತ ಚಿತ್ರೀಕರಣಗೊಂಡಿದೆ.ಇದೀಗ ಫೆಬ್ರವರಿ 21ಕ್ಕೆ ಚಿತ್ರಮಂದಿರಕ್ಕೆ ಬರಲಿದೆ..
*ತೇಜಸ್ ಕಿರಣ್,ಆರೋಹಿ ನೈನಾ..ಚಂದನ ಅನಂತಕೃಷ್ಣ,ರಮೇಶ್ ಭಟ್,ವಿದ್ಯಾಮೂರ್ತಿ ಸಂದೀಪ್ ನಟಿಸಿರುತ್ತಾರೆ.
ಸಂಗೀತ ನಿರ್ದೇಶನವನ್ನು ಮಯೂರ್ ಅಂಬೆಕಲ್ಲು ಮಾಡಿದ್ದಾರೆ.
ಎಲ್ಲರು ಚಿತ್ರ ಮಂದಿರದಲ್ಲಿ ಈ ಫಿಲಂ ನೋಡಿ ಹರಸಿ ಹಾರೈಸಬೇಕಾಗಿ ಮಯೂರ್ ಅಂಬೆಕಲ್ಲು ಅವರ ತಂದೆ
ಶೈಲೇಶ್ ಅಂಬೆಕಲ್ಲು ವಿನಂತಿಸಿಕೊಂಡಿದ್ದಾರೆ.
ಫೆ.21ಕ್ಕೆ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಬಿಡುಗಡೆ
