ಮೈಕ್ರೋ ಪೈನಾನ್ಸ್ ಅವರ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ರಾಜ್ಯ ಮಟ್ಟದಲ್ಲಿ ಇದು ಭಾರೀ ಸುದ್ದಿಯಾಗುತ್ರಿದೆ.
ಮೈಕ್ರೋ ಫೈನಾನ್ಸ್‌ನವರ ಕಿರುಕುಳತಾಳಲಾರದೆ ದಾವಣಗೆರೆಯ ಶಿಕ್ಷಕಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ದಿನಗಳ ಬಳಿಕ ಅವರ ಶವ ಇಂದು ಪತ್ತೆಯಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಎರಡು ದಿನಗ ಹಿಂದೆ ತುಂಗಭದ್ರಾ ನದಿಗೆ ಹಾರಿದ್ದರು. ಮೃತದೇಹ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ.ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್ ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದರು. ಒಂದು ಕಂತು ಬಾಕಿ ಇಟ್ಟುಕೊಂಡಿದ್ದಕ್ಕೆ ಫೈನಾನ್ಸ್‌ನವರಕಿರುಕುಳ ನೀಡುತ್ತಿದ್ದರು. ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರುತ್ತಿದ್ದರು.ಶಾಲೆಯ ಬಳಿಗೂ ಬಂದು ಪೀಡಿಸುತ್ತಿದ್ದರು. ಪೊಲೀಸ್ ಸ್ಟೇಷನ್‌ನಲ್ಲಿ ಶಿಕ್ಷಕ ದಂಪತಿ ವಿರುದ್ಧ ಕೇಸ್ ಕೂಡ ಹಾಕಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆಸಿದ್ದರು. ಈದರಿಂದ ಮನನೊಂದಿದ್ದ ಪುಷ್ಪಲತಾ ಜ. 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ನದಿಗೆ ಹಾರಿದ್ದರು. ತುಂಗಭದ್ರಾ ನದಿಯ ಬಳಿಯ ರಾಘವೇಂದ್ರ ಮಠದ ಬಳಿ ಅವರ ಬ್ಯಾಗ್ ಹಾಗೂ ಮೊಬೈಲ್ ಪತ್ತೆ ಆಗಿತ್ತು.ಸೋಮವಾರದಿಂದ ಈಜು ಪರಿಣಿತರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಶವಕ್ಕಾಗಿ ಶೋಧ ನಡೆಸುತ್ತಿದ್ದರು.
ರಾಘವೇಂದ್ರ ಮಠದಿಂದ 1 ಕಿಲೋ ಮೀಟರ್ ದೂರದಲ್ಲಿ ಜಾಕ್‌ವೆಲ್ ಬಳಿ ತೇಲುತ್ತಿದ್ದ ಶವವನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತುಂಗಭದ್ರಾ ನದಿಗೆ ಪುಷ್ಪಲತಾ ಹಾರಲು ಹೊರಟಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ನದಿ ದಂಡೆಯ ಬಳಿ ಕುಳಿತು ಆಳವಾಗಿ ಯೋಚಿಸಿ ನದಿಗೆ ದುಮುಕಿದ್ದಾರೆ. ಈ ದೃಶ್ಯ ರಾಘವೇಂದ್ರಸ್ವಾಮಿ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ
