ಪೆರಾಜೆ ದೇವಸ್ಥಾನದಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಅನ್ಯಮತೀಯರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದು ವರದಿಯಾಗಿದೆ. ಸುಳ್ಯದ ಸಹನಾ ಶಾಮಿಯಾನದವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಿದ್ದಕ್ಕೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ದೇವಳದವರು ಸ್ವಾತಿ ಸೌಂಡ್ಸ್ ನವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಿದ್ದರು.ಅವರು ಸಹನಾ ದವರಿಗೆ ಸಬ್ ಕಾಂಟ್ರಾಕ್ಸ್ ನೀಡಿದ್ದಾರೆ ಎಂದು ದೇವಳದಿಂದ ತಿಳಿದು ಬಂದಿದೆ.ಇದೀಗ ಹಿಂದು ಸಂಘಟನೆಯವರ ವಿರೋಧದ ಹಿನ್ನಲೆಯಲ್ಲಿ ಜಿ.ಜಿ.ನಾಯಕ್ ಅವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ.
ಪೆರಾಜೆ : ದೇವಸ್ಥಾನದಲ್ಲಿ ಶಾಮಿಯಾನ ಹಾಕಲು ಅನ್ಯಮತಿಯರಿಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದು ಸಂಘಟನೆ
