ಸುಳ್ಯ ತಾಲೂಕಿನ ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ವಸಂತ ನಡುಬೈಲು ಹಾಗೂ ಉಪಾಧ್ಯಕ್ಷರಾಗಿ ನಾಗೇಶ್ ಆಳ್ವ ಆಯ್ಕೆಯಾಗಿದ್ದಾರೆ.
ಜ.29ರಂದು ಅಧ್ಯಕ್ಷತೆಗೆ ಆಯ್ಕೆ ಸಂದರ್ಭದಲ್ಲಿ ಪಕ್ಷದೊಳಗೆ ಮಾತುಕತೆ ನಡೆದಾಗ ಅನೂಪ್ ಬಿಳಿಮಲೆ ಹಾಗೂ ಉಪಾಧ್ಯಕ್ಷತೆಗೆ ರಾಜೇಂದ್ರ ಪ್ರಸಾದ್ ರನ್ನು ನಿರ್ದೇಶಕರು ಸೂಚನೆ ಮಾಡಿದ್ದರಿಂದ ಪಕ್ಷದ ಪ್ರಮುಖರು ಕೂಡಾ ಅನೂಪ್ ರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ರಾಜೇಂದ್ರರು ನಾಮಪತ್ರ ಸಲ್ಲಿಸಲು ಸೂಚನೆ ನೀಡಿದರೆನ್ನಲಾಗಿದೆ.
ಈ ಸಂದರ್ಭ ವಸಂತ ನಡುಬೈಲುರವರು ತನಗೆ ಅಧ್ಯಕ್ಷತೆ ನೀಡಬೇಕೆಂದು ಕೇಳಿದ್ದರೆಂದೂ ತಿಳಿದುಬಂದಿದೆ.
ಇಂದು ಪಕ್ಷದ ಸೂಚನೆಯಂತೆ ಅಧ್ಯಕ್ಷತೆಗೆ ಅನೂಪ್ ಬಿಳಿಮಲೆ ಹಾಗೂ ಉಪಾಧ್ಯಕ್ಷತೆಗೆ ರಾಜೇಂದ್ರ ಪ್ರಸಾದ್ ರವರು ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ವಸಂತ ನಡುಬೈಲು ಅಧ್ಯಕ್ಷತೆಗೆ ಹಾಗೂ ಉಪಾಧ್ಯಕ್ಷತೆಗೆ ನಾಗೇಶ್ ಆಳ್ವ ನಾಮಪತ್ರ ಸಲ್ಲಿಸಿದ್ದರು.
ಸಂಜೆ 4.45 ಕ್ಕೆ ಮತದಾನ ನಡೆಯಿತು.ಸಹಕಾರ ಸಂಘದ 12 ನಿರ್ದೇಶಕರು ಹಾಗೂ ಒಬ್ಬರು ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ವಸಂತ ನಡುಬೈಲು ಆಯ್ಕೆ
