ಪ್ರೇತ ಕಾಟ ಅಧಿಕವಾಗಿದೆ ಎಂದು ಅವುಗಳ ಉಚ್ಛಾಟನೆಗಾಗಿ ಮಂಗಳೂರು ನಗರದ ಕೊಟ್ಟಾರ ಸಮೀಪ ಬುಧವಾರ ಮಧ್ಯರಾತ್ರಿ ರಸ್ತೆ ಸಂಚಾರವನ್ನೇ ನಿಷೇಧ ಮಾಡಲಾಗಿತ್ತು!
ಇಲ್ಲಿನ ಅಬ್ಬಕ್ಕನಗರ ಭಾಗದಲ್ಲಿ ಪ್ರೇತಕಾಟ ಅಧಿಕವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಇದರಂತೆ ತಾಂಬೂಲ ಪ್ರಶ್ನೆ ಇಟ್ಟು ಪರಿಶೀಲಿಸಿದಾಗ ಉಚ್ಛಾಟನೆ ಕ್ರಮ ಮಾಡಬೇಕು ಎಂದು ತಿಳಿಸಲಾಗಿತ್ತು. ಇದರಂತೆ ಉಚ್ಚಾಟನೆ ಕ್ರಮವನ್ನು ಬುಧವಾರ ರಾತ್ರಿ ಮಾಡಲಾಗಿದೆ. ದರ್ಶನ ಸೇವೆ ನಡೆಸಿದ ಬಳಿಕ ಈ ಕ್ರಮ ನೆರವೇರಿದೆ. ಈ ಸಂದರ್ಭ ಜನರ ಹಿತದೃಷ್ಟಿಯಿಂದ ರಸ್ತೆ ಸಂಚಾರವನ್ನು ಸ್ಥಳೀಯರೇ ನಿರ್ಬಂಧಿಸಿದ್ದರು.
ಪ್ರೇತ ಕಾಟ ಅಧಿಕವಾಗಿದೆಯೆಂದು ರಸ್ತೆ ಬಂದ್ !
