ಪುತ್ತೂರು:ಯಾವುದೇ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಎಲ್ಲಾದರೂ ನನ್ನ ಹೆಸರು ಹೇಳಿ,ಶಾಸಕರಿಗೆ ಪಾಲು ನೀಡಬೇಕಾಗಿದೆ ಎಂದು ಹೇಳಿ ಜನರಿಂದ ದುಡ್ಡು ತೆಗೆದುಕೊಂಡಿರುವುದು ಗೊತ್ತಾದರೆ ಅಂಥವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಆಕ್ರೋಶ ಭರಿತ ಮಾತುಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಬಳಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.ಸರಕಾರಿ ಆಪ್ ಬಗ್ಗೆ ಗ್ರಾಮ ಆಡಳಿತಾಧಿಕಾರಿಯೋರ್ವರು ಧಿಕ್ಕಾರ ಕೂಗಿದ ವಿಚಾರ ವೈರಲ್ ಆಗಿರುವ ಕುರಿತು ಪತ್ರಕರ್ತರು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್ ರೈ,ಯಾವುದೇ ಅಧಿಕಾರಿ ಕೂಡಾ ಸರಕಾರದ ಕಾನೂನಿನ ಬಗ್ಗೆ ಧಿಕ್ಕಾರ ಕೂಗುವ ಅಗತ್ಯವಿಲ್ಲ ಎಂದು ಹೇಳಿದರು.
ಪುತ್ತೂರು : ಲಂಚ ತೆಗೆದುಕೊಂಡರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ !
