ಉಬರಡ್ಕ : ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಮೆರವಣಿಗೆ

ಉಬರಡ್ಕ ಮಿತ್ತೂರಿನ ಹುಳಿಯಡ್ಕ ಶ್ರೀ ವೀರಭದ್ರ ಭಂಡಾರದ ಮನೆ ಚಾರಿಟೇಬಲ್ ಟ್ರಸ್ಟ್ ಇಲ್ಲಿಯ ವೀರಭದ್ರ ದೇವರ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ಫೆ.3 ರಂದು ನಡೆಯಲಿದ್ದು, ಇದರ ಪ್ರಯುಕ್ತ ಇಂದು ಬೆಳಿಗ್ಗೆ ಹಸಿರುವಾಣಿ ಮೆರವಣಿಗೆಯು ಕುತ್ತಮೊಟ್ಟೆ ಹೂಪಾರೆಯ ಶ್ರೀ ಅಯ್ಯಪ್ಪ ಶಾಸ್ತಾವು ಭಜನಾ ಮಂದಿರದಿಂದ ಶಂಖನಾದದೊಂದಿಗೆ ಸಾಗಿ ವೀರಭದ್ರ ಕ್ಷೇತ್ರಕ್ಕೆ ತಲುಪಿತು. ನಂತರ ಉಗ್ರಾಣ ತುಂಬಿಸಲಾಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಸಮಿತಿಯ ಪದಾಧಿಕಾರಿಗಳು ಎಲ್ಲರನ್ನೂ ಸ್ವಾಗತಿಸಿದರು.
ಸಂಜೆ ಪೂರ್ಣಕುಂಭ ಸ್ವಾಗತದೊಂದಿಗೆ ತಂತ್ರಿಗಳ ಆಗಮನ, ನಂತರ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆ ಹೋಮ, ವಾಸ್ತುಹೋಮ, ವಾಸ್ತು ಪುಣ್ಯಾಹಂತ ಮತ್ತು ಸುದರ್ಶನ ಹೋಮ ನಡೆಯಲಿದೆ. ಸಂಜೆ ಸಭಾಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top