ಅರಂತೋಡು, ಫೆ. 4 : ಮಾ.15 ,16, 17 ಮತ್ತು 18 ರಂದು ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಭಾರೀ ವೈಭವದಿಂದ ನಡೆಯಲಿದೆ ಎಂದು ಮಹೋತ್ಸವದ ಅಧ್ಯಕ್ಷರಾದ ಪಿ.ಬಿ ಸುಧಾರ ರೈ ಹಾಗೂ ಇತರ ಪದಾಧಿಕಾರಿಗಳು ತಿಳಿಸಿದ್ದಾರೆ.
ದೈವಸ್ತಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತೀಯಾ ಸಮಾಜದ ಆಡಳಿತಕ್ಕೆ ಒಳಪಡುವ ತಾಲೂಕಿನ ಏಕೈಕ ವಯನಾಟ್ ಕುಲವನ್ ದೈವಸ್ಥಾನವಾಗಿರುವ ಅರಂಬೂರಿನಲ್ಲಿ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ, ಎಲ್ಲರ ಸಹಕಾರದಲ್ಲಿ 300 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ನಡೆಯಲಿದ್ದು ಫೆ. 20 ರ ಗುರುವಾರ ಪೂ11.38 ರಿಂದ1:24 ಕೂವಂ ಅಳಕ್ಕಲ್ ( ಭತ್ತ ಅಳೆಯುವುದು)
ನಂತರ ವೀಳ್ಯ ಕೊಡುವುದು ಅಡಯಾಳಂ ಕೊಡುಕ್ಕಳ್) ಪ್ರಸಾದ ವಿತರಣೆ ಅನ್ನದಾನ, ರಾತ್ರಿ 6.30 ರಿಂದ ದರ್ಶನ ಕೈವೀದ್ ನಡೆಯಲಿದೆ,
ಮಾರ್ಚ್ 15 ಶನಿವಾರ ಪೂ.10ಕ್ಕೆ ಹಸಿರುವಾಣಿ ಮೆರವಣಿಗೆ, ಶ್ರೀ ಮೂಕಾಂಭಿಕಾ ಭಜನಾ ಮಂದಿರ ವಠಾರದಿಂದ ನಡೆದು ಬರಲಿದೆ,ಪೂ 11.15 ಕಲವರ ನಿರಕಲ್,ರಾತ್ರಿ 7 ರಿಂದ ವಿಷ್ಣುಮೂರ್ತಿ ಸಪಾರಿವಾರ ದೈವಗಳಿಗೆ ಕೂಡುವುದು,ರಾತ್ರಿ ಗಂಟೆ 10.00ರಿಂದ ಶ್ರೀ ಕೊರ್ತಿಯಮ್ಮ ಕೋಲಗಳು ರಾತ್ರಿ 1.30ರಿಂದ ಶ್ರೀ ಪೊಟ್ಟನ್ ದೈವ ನಡೆಯಲಿದೆ, ಮಾ16 ರ ಆದಿತ್ಯವಾರದಂದು ಪೂ.9.00 ಶ್ರೀ ವಿಷ್ಣು ಮೂರ್ತಿ ದೈವ, ಪೂ ಗಂಟೆ10 .30 ರಿಂದ ಶ್ರೀ ಚಾಮುಂಡಿಯಮ್ಮ, ಗಂಟೆ 12.30 ರಿಂದ ಶ್ರೀ ಗುಳಿಗ ದೈವ,ಸಂಜೆ ಗಂಟೆ 6.00 ರಿಂದ ಕೈವಿದ್ ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳಿಗೆ ಕೂಡುವುದು ನಡೆಯಲಿದೆ.
ಮಾ 17, ಸೋಮವಾರ,ಅಪರಾಹ್ನ 2.00 ಶ್ರೀ ಕಾರ್ನವನ್ ದೈವದ ವೆಳ್ಳಾಟಂ,ಅಪರಾಹ್ನ4 ಗಂಟೆಯಿಂದ ಶ್ರೀ ಕೋರಚ್ಚನ್ ದೈಔದ ವೆಳ್ಳಾಟಂ, ಸಂಜೆ 7 ಗಂಟೆಯಿಂದ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್
ರಾತ್ರಿ ಗಂಟೆ11 ರಿಂದ ವಿಷ್ಣುಮೂರ್ತಿದೈವಕ್ಕೆ ಕೂಡುವುದು, ರಾತ್ರಿ ಗಂಟೆ 12. 00 ರಿಂದ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.
ಮಾ.18 ಮಂಗಳವಾರದಂದು, ಪೂ9.00 ರಿಂದ ಶ್ರೀ ಕಾರ್ನವನ್ ದೈವ, 11.00 ರಿಂದ ಶ್ರೀ ಕೊರಚ್ಚನ್ ದೈವ,ಮದ್ಯಾಹ್ನ 1.00 ರಿಂದ ಶ್ರೀ ಕಂಡನಾರ್ ಕೇಳನ್ ದೈವ, ಸಂಜೆ ಗಂಟೆ 4.00 ರಿಂದ ಶ್ರೀ ವಯನಾಟ್ ಕುಲವನ್ ದೈವ ಸೂಟೆ ಸಮರ್ಪಣೆ ನಡೆದು, ಸಂಜೆ5.00.ರಿಂದ ಶ್ರೀ ವಿಷ್ಣು ಮೂರ್ತಿ ದೈವ, ರಾತ್ರಿ ಗಂಟೆ 1 .00 ರಿಂದ ಮರ ಪಿಳರ್ಕಲ್ ನಂತರ ಕೈವಿದ್ ನಡೆಯಲಿದೆ
ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಧ್ಯಮಿ ಕೃಷ್ಣ ಕಾಮತ್ , ಮಹೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಪವಿತ್ರನ್ ಗುಂಡ್ಯ,ಕೋಶಾಧಿಕಾರಿ ಜತ್ತಪ್ಪ ರೈ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕೋಶಾಧಿಕಾರಿ ರಧೀಶನ್ ಅರಂಬೂರು, ಕುಟುಂಬದ ಯಜಮಾನ ಕುಂಞಿಕಣ್ಣ ಎ, , ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಂಡ್ಕ, ಕಾರ್ಯಾಧ್ಯಕ್ಷ ನಾರಾಯಣ ಕೇಕಡ್ಕ ,ಎನ್ ಎ ರಾಮಚಂದ್ರ, ಕೆ ಎಸ್ ಕೃಷ್ಣಪ್ಪ ಕೆದಂಬಾಡಿ, ಕುಂಞಿರಾಮನ್ ಶ್ರೀ ಶೈಲ, ರಾಧಾಕೃಷ್ಣ ,ಸುರೇಶ್ ಅರಂಬೂರು ರಿವಾರಕಾನ,ಪದ್ಮಯ್ಯ ಪಡ್ಪು, ಪ್ರಮುಖರಾದ ಅಶೋಕ್ ಪೀಚೆ, ಎ.ಸಿ ವಸಂತ, ಗಂಗಾಧರ ನೆಡ್ಚಿಲ್ ,ಜಯಪ್ರಕಾಶ್ ,ಮೊದಲಾದವರು ಉಪಸ್ಥಿತರಿದ್ದರು