ಹಲವು ವರ್ಷಳಿಗೊಮ್ಮೆ ನಡೆಯುವ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮುಂದಿನ ಮಾರ್ಚ್ 15,16,17 ಮತ್ತು 18 ರಂದು ನಡೆಯಲಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಫೆ.4 ರಂದು ದೈವಸ್ಥಾನದಲ್ಲಿ ನೆರವೇರಿತು.
ದೈವಸ್ಥಾನದ ಕುಟುಂಬದ ಯಜಮಾನ ಹಿರಿಯರಾದ ಕುಂಞಕಣ್ಣ ಅವರು ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿ ಅಧ್ಯಕ್ಷ ಸುಧಾರ ರೈ,ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕಾರ್ಯಾಧ್ಯಕ್ಷರಾದ ಎನ್.ಎ.ರಾಮಚಂದ್ರ, ನಾರಾಯಣ ಕೇಕಡ್ಕ ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಡು, ಕುಂಞರಾಮನ್ ಶ್ರೀ ಶೈಲಂ, ಕೆ.ಎಸ್. ಕೃಷ್ಣಪ್ಪ ಕೆದಂಬಾಡಿ, ಮಹೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಪವಿತ್ರನ್ ಗುಂಡ್ಯ,ಕೋಶಾಧಿಕಾರಿಗಳಾದ ಜತ್ತಪ್ಪ ರೈ,ರಧೀಶನ್ ಅರಂಬೂರು, ಗೌರವ ಸಲಹೆಗಾರರಾದ ಕೊರಗಪ್ಪ ಮಾಸ್ತರ್ ಕಣಕ್ಕೂರು, ಜಯಪ್ರಕಾಶ್ ಕುಂಚಡ್ಕ, ಎ.ಸಿ.ವಸಂತ,ರತ್ನಾಕರ ರೈ ಅರಂಬೂರು, ಚಂದ್ರಶೇಖರ ನೆಡ್ಡಿಲು, ಅಶೋಕ ಪೀಚೆ, ಉಮೇಶ್ ನಾಯ್ಕ ಜಯಪ್ರಕಾಶ್ ಅರಂಬೂರು, ಎನ್.ಎ.ಗಂಗಾಧರ ನೆಡ್ಡಿಲು,ಪ್ರಭಾಕರ ನಾಯರ್,ಭಾಸ್ಕರ ನಾಯರ್, ಕುಕ್ಕಪ್ಪ ರೈ ಅರಂಬೂರು ಸುರೇಶ್ ಅರಂಬೂರು,ಮೋಹನ ನಾಯ್ಕ ಕೂಟೇಲು ಹಾಗೂ ಸ್ಥಳೀಯರು, ಉಪ ಸಮಿತಿಯ ಸಂಚಾಲಕರು ಮತ್ತು ಸದಸ್ಯರು, ಮಹಿಳಾ ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ
