ಸಂಪಾಜೆ ಪೇರಡ್ಕ ಗೂನಡ್ಕ ಉರೂಸ್ ಸಮರೋಪ, ನಮ್ಮ ಕಾಯಕದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿ – ಸಯ್ಯದ್ ಝೈನುಲ್ ಆಬಿದಿನ್ ತಂಘಳ್ ದುಗ್ಗಲಡ್ಕ

ನಾವು ಮಾಡುವ ಕೆಲಸ ಅಥವಾ ಸೇವೆಯಲ್ಲಿ ವಂಚನೆ ಮೋಸ ಇರಬಾರದು. ಪ್ರಾಮಾಣಿಕವಾಗಿರಬೇಕು, ಯಜಮಾನನಿಗೆ ಯಾವತ್ತು ಮೋಸ ಮಾಡಬಾರದು ಅವರಿಗೆ ತೃಪ್ತಿಯಾಗುವಂತಾ ಸೇವೆ ಮತ್ತು ಕಾಯಕವಾಗಿರಬೇಕೆಂದು ಬಹು| ಸಯ್ಯದ್ ಝೈನುಲ್ ಆಬಿದೀನ್ ತಂಘಳ್ ದುಗ್ಗಲಡ್ಕ ಹೇಳಿದರು. ಅವರು ಫೆ.2 ರಂದು ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕ ಇದರ ಉರೂಸ್ ಸಮಾರೋಪ ಸಮಾರಂಭದಲ್ಲಿ ದುವಾಶೀರ್ವಾಚನ ಮಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ಸ್ಥಳೀಯ ಖತೀಬರಾದ ಬಹು। ನಈಮ್ ಫೈಝಿ ಅಲ್ ಮುಅಬರಿ ಪ್ರಸ್ತಾವನೆ ಗೈದರು. ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಖ್ಯಾತ ವಾಗ್ಮಿ ಬಹು। ಶಮೀರ್ ದಾರಿಮಿ ಕೊಲ್ಲಂ ಮಾತನಾಡಿ ತಾಯಿಯವರು ಉಣಬಡಿಸುವ ಆಹಾರದಲ್ಲಿ ತಂದೆಯವರ ಬೆವರು ಇದೆ ಎಂಬುದು ಮರೆಯಬಾರದು ಅಂತಹ ತಂದೆಯವರನ್ನು ನಾವು ಮಾತನಾಡಿಸುವುದಿಲ್ಲ ಮರೆಯುತ್ತಿರುವುದು ಖೇದಕರ ಎಂದರು.
ಎ.ಆರ್.ಡಿ .ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಅಬ್ದುಲ್ಲಾ ಕುಂಞಿ ಸಂಖೇಶ್, ಎಸ್ .ಕೆ. ಎಸ್ .ಎಸ್ .ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಹಮೀದ್ ಮುಸ್ಲಿಯಾರ್, ಹಾರೀಸ್ ಅಝ್ಹರಿ ಗಟ್ಟಮನೆ, ನೌಶಾದ್ ಅಝ್ಹರಿ, ಕಾರ್ಯದರ್ಶಿ ಪಿ.ಕೆ ಉಮ್ಮರ್, ಉಪಾಧ್ಯಕ್ಷ ಟಿ.ಬಿ ಹನೀಫ್ ಕೋಶಾಧಿಕಾರಿ ಮಹಮ್ಮದ್ ಕುಂಇ’ ತೆಕ್ಕಿಲ್ ಪೇರಡ್ಕ, ಗೌರವಾಧ್ಯಕ್ಷ ಆರಿಫ್ ಟಿ.ಇ,ತೆಕ್ಕಿಲ್, ಕೆ.ಎಂ ಇಸ್ಮಾಯಿಲ್ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಅನ್ನದಾನ ನಡೆಯಿತು. ಉರೂಸ್ ಕಾರ್ಯಕ್ರಮದ ಪ್ರತೀ ದಿನ ಬಂದ ಭಕ್ತಾದಿಗಳಿಗೆ ರಾತ್ರಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ನೆರೆವೇರಿಸಲು ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು, ಯೂತ್ ಫ್ರೆಂಡ್ ಗೂನಡ್ಕ ಮತ್ತು ಪೇರಡ್ಕ ಯುವಕರ ತಂಡ,ಮದರಸ ವಿದ್ಯಾರ್ಥಿಗಳು, ಅಸುಪಾಸಿನ ಊರಿನ ಯುವಕರು,ಪೇರಡ್ಕ ಜಮಾತ್ ಸದಸ್ಯರು ದೀನಿ ಪ್ರೇಮಿಗಳು ಹಗಲಿರುಳು ದುಡಿದು ಕಾರ್ಯಕ್ರಮ ಯಶಸ್ವಿಯಾಗಿದೆ ಸಹಕರಿಸಿದ ಸರ್ವರನ್ನು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷರು ಪೇರಡ್ಕ ಗೂನಡ್ಕ ಜಮಾತ್ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top