ಸತ್ತ ಆನೆಯ ದಫನ ಮಾಡಿದ ಅರಣ್ಯ ಇಲಾಖೆ

ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಧರ್ಮಸ್ಥಳ – ಮುಂಡಾಜೆ ಮೀಸಲು ಅರಣ್ಯದ ಅನಾರು ಪ್ರದೇಶದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಫೆ.13 ರಂದು ಮಧ್ಯಾಹ್ನ ಕಂಡು ಬಂದ ಕಾಡಾನೆ ರಾತ್ರಿ ಸುಮಾರು 11 ಗಂಟೆಗೆ ಸಾವನ್ನಪ್ಪಿದ ಘಟನೆ ಹಿನ್ನಲೆ ಫೆ. 14 ರಂದು ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಲಾಯಿತು.
25 ರಿಂದ 30 ವರ್ಷದ ಹೆಣ್ಣು ಆನೆ ಆಗಿದ್ದು, ಕಳೆದ ಎರಡು ತಿಂಗಳಿಂದ ಸರಿಯಾದ ಆಹಾರ ಸೇವಿಸುತ್ತಿರಲ್ಲಿಲ್ಲ ಎನ್ನಲಾಗಿದೆ . ಆನೆಯ ದೇಹದ ಹೊರಗಡೆ ಯಾವುದೇ ಗಾಯವಿಲ್ಲ ದೇಹದ ಒಳಗೆ ಬಹು ಅಂಗಾಂಗ ವೈಫಲ್ಯ ಇರುವುದು ವೈದ್ಯರ ಮರಣೋತ್ತರ ಪರೀಕ್ಷೆ ವೇಳೆ ಕಂಡು ಬಂದಿದೆ ಎಂದು ಡಿಎಫ್‌ಓ ಅಂತೋಣಿ ಮರಿಯಪ್ಪ ಮಧ್ಯಮಗಳಿಗೆ ಮಾಹಿತಿ ನೀಡಿದರು.ಭದ್ರತಾ ದೃಷ್ಟಿಯಿಂದ ಆನೆಯ ಎರಡು ದಂತವನ್ನು ತೆಗೆದು ಬೆಳ್ತಂಗಡಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.ಬೆಳ್ತಂಗಡಿ ಡಾ. ರವಿ ಕುಮಾರ್.ಎಮ್, ಚಾರ್ಮಾಡಿ ಡಾ.ಯತೀಶ್ ಕುಮಾರ್.ಎಮ್.ಎಸ್ ಮರಣೋತ್ತರ ಪರೀಕ್ಷೆ ನಡೆಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top