ಕಾಡು ಹಂದಿಯ ಮಾಂಸ ನೀಡುವುದಾಗಿ ಅನೇಕರಿಂದ ಹಣ ಪಡೆದು ಅಪರಿಚಿತ ವ್ಯಕ್ತಿ ವಂಚಿಸಿದ ಘಟನೆ ಎಡಮಂಗಲದಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರಕರಣ ಬೆಳಕಿಗೆ ಬರುತ್ತಿದೆ.
ಎಡಮಂಗಲದ ವ್ಯಕ್ತಿಯೊಬ್ಬರು ಮಹಾಕಾಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ವ್ಯಕ್ತಿ “ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದ .ತುಳುವರ ಕೆಡ್ಡಸವೂ ಆಗಿರುವ ಕಾರಣ ಮತ್ತು ಕೆ.ಜಿಗೆ 300 ರೂ ಎಂದಿದ್ದರಿಂದ ಹಿರಿಯ ವ್ಯಕ್ತಿ ಆತನ ಬೈಕ್ ನಲ್ಲಿ ಹೋಗಿ ಎಂ.ಎಸ್.ಎಲ್ ಶಾಪ್ ಬಳಿಯ ಇತರ ವ್ಯಕ್ತಿಗಳ ಬಳಿಯೂ ತಿಳಿಸಿದಾಗ ಅವರೂ ಮಾಂಸ ಬೇಕು ಹೇಳಿದ್ದು ಅವರಿಂದಲೂ ಸಾವಿರಾರೂ ರೂ ಹಣ ಸಂಗ್ರಹಿಸಿ ಆತನಿಗೆ ನೀಡಿದ್ದರು.
ಗ್ರಾಮದ ನಿವಾಸಿಗಳಿಗೆ ವಂಚಿಸಿದ ವ್ಯಕ್ತಿಯು ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಆ ಬಳಿಕ ಎಡಮಂಗಲ- ಕಡಬ ಸಂಪರ್ಕಿಸುವ ಪಲೋಲಿ ಸೇತುವೆ ದಾಟಿ ಮುಂದಕ್ಕೆ ಆ ಹಿರಿಯ ವ್ಯಕ್ತಿಯನ್ನು ಬೈಕ್ ನಿಂದ ಇಳಿಸಿ ಕ್ಷಣಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ ಹೋದಾತ ಬರಲೇ ಇಲ್ಲ. ಇತ್ತ ಎಡಮಂಗಲದಲ್ಲಿ ಮಾಂಸಕ್ಕಾಗಿ ಕಾಯುತ್ತಿದ್ದವರು ಹಿರಿಯ ವ್ಯಕ್ತಿಯನ್ನು ತಡವಾಗಿ ವಿಚಾರಿಸಿದಾದ ಮೋಸ ಹೋಗಿರುವುದು ಗೊತ್ತಾಗಿದೆ. ಈ ಅಪರಿಚಿತ ಆಲಂಕಾರು ,ಮರ್ದಾಳ ಪರಿಸರದಲ್ಲೂ ವಂಚಿಸಿರುವ ಸುದ್ದಿಗಳು ಬಂದಿವೆ.
ಕಾಡು ಹಂದಿಯ ಮಾಂಸ ನೀಡುವುದಾಗಿ ಹಣ ಪಡೆದು ಮಾಂಸ ನೀಡದೆ ಭಾರೀ ವಂಚನೆ !
