ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿ ಬೆಳೆಯಲು ಅರೆಭಾಷೆ ಕಾಮಿಡಿ ವಿನೂತನ ಕಾರ್ಯಕ್ರಮ : ಸದಾನಂದ ಮಾವಂಜಿ

ಅರೆಭಾಷೆ ಅಕಾಡೆಮಿಯು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಅರೆಭಾಷೆ ಕಾಮಿಡಿ ಕೂಡ ಇದರಲ್ಲಿ ಒಂದು. ಅರೆಭಾಷೆ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸಲು ಉತ್ತಮ ಅವಕಾಶ ಎಂದು ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಹೇಳಿದರು.
V4 ನ್ಯೂಸ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್‌ನ ಸಹಯೋಗದಲ್ಲಿ ‘ಅರೆಭಾಷೆ
ಕಾಮಿಡಿ’ ರಿಯಾಲಿಟಿ ಶೋ ಗೆ ತಂಡಗಳ ಆಯ್ಕೆಗಾಗಿ ಆಡಿಷನ್ ನನ್ನು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು.
.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್‌ ಮುಂಡೋಡಿ ಮಾತನಾಡಿ’ ಅರೆ ಭಾಷೆ ಒಂದು ಜನಾಂಗದ ಭಾಷೆಯಾಗಿ ಉಳಿದಿಲ್ಲ. ಸಮುದಾಯದ ಭಾಷೆಯಾಗಿದೆ ಎಂದರು.
ವಿ4 ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಕುಂದರ್, ಪ್ರಾದೇಶಿಕ ಸುದ್ದಿ ಸಂಪಾದಕ ಪುಷ್ಪರಾಜ್ ಶೆಟ್ಟಿ, ಎಂ.ಬಿ.ಫೌಂಡೇಶನ್‌ ಅಧ್ಯಕ್ಷ ಎಂ.ಬಿ.ಸದಾಶಿವ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್‌ ಬಂಟ್ವಾಳ್, ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ನಿರ್ದೇಶಕರುಗಳಾದ ಎ.ವಿ.ತೀರ್ಥರಾಮ, ಚಂದ್ರ ಕೋಲ್ಟಾರ್, ಎಂ.ಬಿ. ಪೌಂಡೇಶನ್‌ ಸದಸ್ಯ ಎಸ್.ಆರ್. ಸೂರಯ್ಯ, ಅರೆ ಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಅರೆಭಾಷೆ ಅಕಾಡೆಮಿ ಸದಸ್ಯರಾದ ತೇಜಕುಮಾರ್ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಡಾ.ಎನ್.ಎ.ಜ್ಞಾನೇಶ್, ಲತಾ ಕುದ್ಪಾಜೆ ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top