ಸುಳ್ಯ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾದ ಶವದ ಗುರುತು ಪತ್ತೆಯಾಗಿದ್ದು, ಇದು ಪಿರಿಯಾಪಟ್ಟಣದ ಅಜಿತ್ (24) ಎಂಬರ ಶವ ಎಂದು ತಿಳಿದುಬಂದಿದೆ.ಈತ ಸುಳ್ಯದ ವೆಲ್ಕಮ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನೆಂದೂ, ಕೆಲ ತಿಂಗಳ ಹಿಂದೆ ಊರಿಗೆ ಹೋಗುತ್ತೇನೆ ಎಂದು ತೆರಳಿದ್ದ ಎನ್ನಲಾಗಿದೆ. ಫೆ.16ರಂದು ಪಯಸ್ವಿನಿ ನದಿ ಹರಿಯುವ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ ಸ್ಥಳೀಯರಿಗೆ ಕೊಳೆತ ಶವ ಕಂಡುಬಂತೆನ್ನಲಾಗಿದೆ. ಪೋಲೀಸರಿಗೆ ವಿಷಯ ತಿಳಿಸಲಾಯಿತು. ಪರಿಶೀಲನೆ ನಡೆಸಿದಾಗ ದಾಖಲೆ ಇದ್ದುದನ್ನು ಕಂಡು ಪ್ರದೀಪ್ ಪಿರಿಯಾಪಟ್ಟಣ ಆತ ಸುಳ್ಯದ ಹೋಟೆಲ್ ನಲ್ಲಿ ಕೆಲಸಕ್ಕಿದ್ದ ಮಾಹಿತಿ ಲಭಿಸಿತೆಂದು ತಿಳಿದುಬಂದಿದೆ.
ಸುಳ್ಯ : ನದಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ!
