ಅರಂತೋಡು ಗ್ರಾಮ ಸಭೆ,ಗ್ರಾಮ ಸಭೆಗೆ ಗೈರು ಹಾಜರಾದ ಇಲಾಖಾಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ಬರೆಯಲು ನಿರ್ಣಾಯ

ಆರಂತೋಡು ಗ್ರಾಮ ಪಂಚಾಯಿತ್ ನ ದ್ವಿತೀಯ ಹಂತದ 2024-25ನೇ ಸಾಲಿನ ಗ್ರಾಮ ಸಭೆಯು ಆರಂತೋಡು ಗ್ರಾಮ ಪಂಚಾಯತ್ ನ “ಅಮೃತ ಸಭಾಂಗಣ”ದಲ್ಲಿ ಫೆ. 17 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ನಡೆಯುತು.
ಸಭೆಯ ನೋಡಲ್ ಅಧಿಕಾರಿಗಳಾಗಿ ಹಿಂದುಳಿದ ವರ್ಗಗಳ
ಕಲ್ಯಾಣ ಅಧಿಕಾರಿ ಗೀತಾ ಭಾಗವಹಿಸಿದ್ದರು. ಗ್ರಾಮ
ಸಭೆಯಲ್ಲಿ ಮುಖ್ಯ ವಾಗಿ ತೊಡಿಕಾನ ಗ್ರಾಮಕ್ಕೆ ಸಂಬಂಧಪಟ್ಟ
ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ,ಪೋಲಿಸ್ ಇಲಾಖೆ ಯ ಅಧಿಕಾರಿಗಳು ಗೈರು ಹಾಜರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ
ಸಂಬಂಧಪಟ್ಟ ಜಿಲ್ಲೆಯ ಇಲಾಖಾಧಿಕಾರಿಗಳಿಗೆ ಬರೆಯಲು
ಗ್ರಾಮ ಸಭೆಯಲ್ಲಿ ನಿರ್ಣಯ ಮಂಡಿಸಿದರು. ನಿವ್ರತ್ತ
ಪ್ರಾಂಶುಪಾಲರಾದ. ಕೆ ಆರ್ ಗಂಗಾಧರ್ ಯವರು
ಬೆಳೆಯುತ್ತಿರುವ ಅರಂತೋಡು ಪೇಟೆಯನ್ನು
ಸುಂದರಗೊಳಿಸುವ ರಸ್ತೆಯ ಎರಡು ಬದಿ ಸ್ವಚ್ಛಗೊಳಿಸಿ ನೆರಳು
ನೀಡುವ ಮರಗಳನ್ನು ನೇಡುವ ಬಗ್ಗೆ ಹಾಗೂ ಕುಲ್ಟಾರ್ ಬಳಿ
ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಲಹೆ
ನೀಡಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ.
ಕರುಣಾಕರ ಅಡ್ಕ.ರವರು ಮಾತಾಡಿ ಅಡ್ಯಡ್ಕದಲ್ಲಿ ಸಮುದಾಯ ಭವನ ನಿರ್ಮಾಣ ಮತ್ತು ಆರೋಗ್ಯ ಕೇಂದ್ರದ ಜಾಗದ ಸಮಸ್ಯೆಯನ್ನು ಪರಿಹರಿಸಿ ಆರೋಗ್ಯ ಕೇಂದ್ರದ ಉಪ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದರು. ಮಾಜಿ ಗ್ರಾಮ
ಪಂಚಾಯತ್‌ ಉಪಾಧ್ಯಕ್ಷರು ಕೆಡಿಪಿ ಸದಸ್ಯರಾದ ಅಶ್ರಫ್‌
ಗುಂಡಿ ಆರಂತೋಡು ಸಮುದಾಯ ಆಸ್ಪತ್ರೆ ಮತ್ತು
ಆರಂತೋಡು ಪಶು ಚಿಕಿತ್ಸಾಲಯಕ್ಕೆ ಶಾಶ್ವತ ವೈದ್ಯಾಧಿಕಾರಿಗಳ
ನೇಮಕಕ್ಕೆ ಒತ್ತಾಯಿಸಿ ಆರಂತೋಡು ಅಂಚೆ ಕಚೇರಿಯಲ್ಲಿ
ಆದಾ‌ರ್ ಸೇವಾ ಕೇಂದ್ರವನ್ನು ಮರು ಆರಂಭಿಸಲು
ಆಗ್ರಹಿಸಿದರು. ಸುಂದರ ಬಾಜಿನಡ್ಕ ಸ್ವಸಹಾಯ ಸಂಘಗಳ
ಸಭೆಗಳನ್ನು
ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲು ಅನುಮತಿ ಕೋರಿದರು. ಗ್ರಾಮ ಸಭೆಯಲ್ಲಿ ರಸ್ತೆ, ನರೇಗಾ, ಕುಡಿಯುವ ನೀರಿನ ಬಗ್ಗೆ ವಿಸ್ತ್ರತ ಚರ್ಚೆ ನಡೆಯಿತು.
ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸರಕಾರದ ವಿವಿಧ ಸವಲತ್ತುಗಳು ಮತ್ತು ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಂಚಾಯತ್‌ ಸದಸ್ಯರಾದ ಹರಿಣಿ ದೇರಾಜೆ, ಶ್ವೇತಾ ಅರಮನೆ ಗಾಯ, ಮಾಲಿನಿ ಉಳುವಾರು, ಸರಸ್ವತಿ ಬಿಳಿ ಯಾರು, ಸುಜಯ ಮೇಲೆ ಅಡ್ತಲೆ, ಉಷಾ ಅಡ್ಯಡ್ಕ, ವಿನೋದ ತೊಡಿಕಾನ, ಶಿವಾನಂದ ಕುಕ್ಕುಂಬಳ, ವೆಂಕಟ್ರಮಣ ಪೆತ್ತಾಜೆ, ಪುಷ್ಪಾಧರ ಕೊಡಂಕೇರಿ, ರವೀಂದ್ರ ಪೂಜಾರಿ ಪಂಜಿಕೋಡಿ, ಗಂಗಾಧರ ಗುಂಡ್ಲ ಬನ, ಇಲಖಾಧಿಕಾರಿಗಳು, ಮತ್ತು ಹೆಚ್ಚಿನ ಗ್ರಾಮಸ್ಥರು ಭಾಗವಸಿದ್ದರು. ಸಭೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್.ಎಲ್ಲರನ್ನೂ ಸ್ವಾಗತಿಸಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯತ್‌ ಸಿಬ್ಬಂದಿ ಈಶ್ವರ್. ಗ್ರಾಮ ಸಭೆಯ ವರದಿ ವಾಚಿಸಿದರು ಉಪಾಧ್ಯಕ್ಷರಾದ ಭವಾನಿ. ಸಿ. ಎ. ಧನ್ಯವಾದ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top