ಸುಳ್ಯ ತಾಲೂಕಿನ ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಕಬಡ್ಡಿ ಪಂದ್ಯಾಟವನ್ನು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಉದ್ಘಾಟಿಸಲಿದ್ದಾರೆ ಎಂದು ಫೆ.19 ರಂದು ಐವರ್ನಾಡಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ
ಗೆಳೆಯರ ಬಳಗ ಐವರ್ನಾಡು ಇದರ ಗೌರವಾಧ್ಯಕ್ಷ ಹಾಗೂ ಪಂದ್ಯಾಟದ ನೇತೃತ್ವ ವಹಿಸಿಕೊಂಡಿರುವ ಎಸ್.ಎನ್.ಮನ್ಮಥರವರು ತಿಳಿಸಿದರು.
ಕಬಡ್ಡಿ ಕೋರ್ಟ್, ಮ್ಯಾಟ್ ಅಳವಡಿಕೆ, 3,500 ಜನ
ಕುಳಿತುಕೊಳ್ಳುವ ಗ್ಯಾಲರಿ ನಿರ್ಮಿಸಲಾಗುವುದು.
ಅಂತರಾಜ್ಯ ಮಟ್ಟದ ಬಲಿಷ್ಟ 12 ತಂಡಗಳು ಭಾಗವಹಿಸಲಿದ್ದು ಒಟ್ಟು 21 ಮ್ಯಾಚ್ ನಡೆಯುತ್ತದೆ.
ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದರು.
ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಚೇರ್ ಮೆನ್ ರಾಕೇಶ್ ಮಲ್ಲಿ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ
ಮುರುಳ್ಯ ಸಹಿತ ಹಲವು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. .ಪಂದ್ಯಾಟದ ಪ್ರಥಮ ನಗದು ಬಹುಮಾನ ರೂ.70,000 ದ್ವಿತೀಯ .50,000 $ ., 25,000 3 4 25,000 ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಸಾತ್ವಿಕ್ ಕುದುಂಗು, ಸಂಚಾಲಕ ವಾಸುದೇವ ಬೊಳುಬೈಲು,ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ,ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ, ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ನ ಗೌರವ ಸಲಹೆಗಾರರಾದ ದೊಡ್ಡಣ್ಣ ಬರೆಮೇಲು, ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸೂಫಿ ಪೆರಾಜೆ,ಹಿರಿಯರಾದ ಮಾಧವ ಭಟ್ ಶೃಂಗೇರಿ, ವೆಂಕಪ್ಪ ಗೌಡ ಜೆ.ಟಿ.ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸೊಸೈಟಿ ಉಪಾಧ್ಯಕ್ಷ ಮಹೇಶ್ ಜಬಳೆ, ಗೋಪಾಲಕೃಷ್ಣ ಚೆನ್ನೂರು, ಪ್ರಭಾಕರ ಕುತ್ಯಾಡಿ,ಶಾಂತಾರಾಮ ಕಣಿಲೆಗುಂಡಿ,ಬಾಲಕೃಷ್ಣ ಮಡ್ತಿಲ, ವೀರನಾಥ ಸಿ.ಕೂಪ್,ಸಚಿನ್ ಕೊಚ್ಚಿ,ಚಂದ್ರಕಾಂತ ಕೋಡ್ತೀಲು,ಶೇಖರ ಮಡ್ತಿಲ,ರಾಮಚಂದ್ರ ಕೊಯಿಲ,ರಂಜನ್ ಮೂಲೆತೋಟ,ಚಂದ್ರಶೇಖರ ಎಸ್, ನಟರಾಜ ಸಿ.ಕೂಪ್, ರವಿರಾಜ ಪೂಜಾರಿಮನೆ, ರೋಹಿತ್ ಬಾಂಜಿಕೋಡಿ ಹಾಗೂ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಫೆ.22 ಮತ್ತು ಫೆ.23 ರಂದು ಐವರ್ನಾಡಿನಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
