ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಿತು.ಪೈನಲ್ ಪ್ರಥಮ ಹಂತದಲ್ಲಿ
ರೋಚಕತೆ ಕಂಡ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಬ್ಯಾಂಕ್ ಆಫ್ ಬರೋಡ ರೂ.70,000 ಹಾಗೂ ಟ್ರೋಫಿ ಯನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ.ಕಾಲೇಜು ಉಜಿರೆ ರೂ.50,000 ಹಾಗೂ ಟ್ರೋಫಿ ಯನ್ನು ಪಡೆದುಕೊಂಡಿತು.
ತೃತೀಯ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ ರೂ.25,000 ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.
ಚತುರ್ಥ ಸ್ಥಾನವನ್ನು ಎನ್.ಎಂ.ಸಿ.ಸುಳ್ಯ ರೂ.,25,000 ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು
ಬೆಸ್ಟ್ ರೈಡರ್ ಆಗಿ ಎನ್.ಎಂ.ಸಿ. ತಂಡದ ಮಹೇಶ್, ಬೆಸ್ಟ್ ಕ್ಯಾಚರ್ ಆಗಿ ಎಸ್.ಡಿ.ಎಂ. ನ ಕಾರ್ತಿಕ್, ಬೆಸ್ಟ್ ಆಲ್ ರೌಂಡರ್ ಆಗಿ ಬ್ಯಾಂಕ್ ಆಫ್ ಬರೊಡದ ಸಾಯಿಪ್ರಸಾದ್ ಬಹುಮಾನ ಪಡೆದುಕೊಂಡರು. ಪಂದ್ಯಾಟ ನಡೆದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು.
ಐವರ್ನಾಡು ಗೆಳೆಯರ ಬಳಗದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥ, ಜ್ಯೋತ್ಸಾ ಪಾಲೆಪ್ಪಾಡಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ, ಅಶ್ವಿನಿ ಕೊಪ್ಪತ್ತಡ್ಕ, ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಅರ್ಥ್ ಮೂವರ್ಸ್ ಮಾಲಕ ಪದ್ಮನಾಭಬೀಡು,ಬೆಂಗಳೂರಿನ ಉದ್ಯಮಿ ಲಕ್ಷ್ಮೀನಾರಾಯಣ ಕಣಿಪಿಲ,ಪ್ರೌಢ ಶಾಲಾ ಹಿರಿಯ ಅಧ್ಯಾಪಕ ಸೂಫಿ ಪೆರಾಜೆ,ಪ್ರಗತಿಪರ ಕೃಷಿಕ ದಾಮೋದರ ಜಬಳೆ, ಹಿರಿಯರಾದ ಮಾಧವ ಭಟ್ ಶೃಂಗೇರಿ,ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ದೊಡ್ಡಣ್ಣ ಬರೆಮೇಲು,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೆ.ಟಿ.ವೆಂಕಪ್ಪ ಗೌಡ ಜಬಳೆ,ಗೆಳೆಯರ ಬಳಗದ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ ವಂದಿಸಿದರು. ತೀರ್ಪುಗಾರರಾದ ಶಿವರಾಮ ಏನೆಕಲ್ ವಿಜೇತರ ಪಟ್ಟಿ ವಾಚಿಸಿದರು.ಪ್ರಸಾದ್ ಕಾಟೂರು ಮತ್ರು ಗುರುಪ್ರಸಾದ್ ಶಿರಸಿ ಕಬಡ್ಡಿ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.ಈ ಕಬಡ್ಡಿ ಪಂದ್ಯಾಟದಲ್ಲಿ ದಿನ ನಿತ್ಯ ಮೂರುವರೆ ಸಾವಿರಕ್ಕೂ ಅಧಿಕ ಜನ ವೀಕ್ಷಿಸಿ ಐವರ್ನಾಡಿನ ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ಐವರ್ನಾಡು : ಅಂತರ್ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬ್ಯಾಂಕ್ ಆಫ್ ಬರೋಡ ಪ್ರಥಮ,ಎಸ್.ಡಿ.ಎಂ ಉಜಿರೆ ದ್ವಿತೀಯ
